ಚಿತ್ರರಂಗದ ಯಾರದ್ದೇ ಸಿನಿಮಾ ಆಗಿರಲಿ.. ಪ್ರಚಾರ ಮಾಡೋಕೆ ಕರೆದರೆ ಉತ್ಸಾಹದಿಂದ ಬರುತ್ತಿದ್ದ ಪುನೀತ್ ಅವರ ಜೇಮ್ಸ್ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಅವರೇ ಇಲ್ಲ. ಇಡೀ ಚಿತ್ರರಂಗಕ್ಕೆ ಅಪ್ಪು ಆಗಿದ್ದ ಅವರ ಚಿತ್ರದ ಪ್ರಚಾರಕ್ಕೆ ಇಡೀ ಚಿತ್ರರಂಗವೇ ಟೊಂಕ ಕಟ್ಟಿ ನಿಂತಿದೆ.
ಚಿತ್ರದ ಪ್ರಚಾರಕ್ಕಾಗಿಯೇ ಒಂದು ಹಾಡನ್ನು ಮಾಡಲಾಗಿದೆ. ಅದೇ ಟ್ರೇಡ್ಮಾರ್ಕ್ ಸಾಂಗ್. ಈ ಹಾಡಿನಲ್ಲಿ ಚಂದನ್ ಶೆಟ್ಟಿ, ಎಂಸಿ ವಿಕ್ಕಿ, ಅದಿತಿ ಸಾಗರ್, ಶರ್ಮಿಳಾ, ಚರಣ್ ರಾಜ್ ಮತ್ತು ಯುವ ರಾಜ್ಕುಮಾರ್ ಹಾಡಿದ್ದಾರೆ. ಇನ್ನು ಹಾಡಿನಲ್ಲಿ ಹೆಜ್ಜೆ ಹಾಕಿರೋದು ರಚಿತಾ ರಾಮ್, ಅಶಿಕಾ ರಂಗನಾಥ್ ಮತ್ತು ಶ್ರೀಲೀಲಾ. ಇವರ ಜೊತೆ ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಚಂದನ್ ಶೆಟ್ಟಿ ಕೂಡಾ ಹೆಜ್ಜೆ ಹಾಕಿರೋದು ವಿಶೇಷ. ರ್ಯಾಪ್ ಸ್ಟೈಲ್ನಲ್ಲಿರೋ ಹಾಡಿಗೆ ಸಾಹಿತ್ಯ ನಿರ್ದೇಶಕ ಚೇತನ್ ಕುಮಾರ್ ಅವರದ್ದು.
ಮಾರ್ಚ್ 17ರಂದು ಜೇಮ್ಸ್ ರಿಲೀಸ್ ಆಗುತ್ತಿದ್ದು, ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅದ್ಧೂರಿ ಬಿಡುಗಡೆಗೆ ಪ್ಲಾನ್ ಮಾಡುತ್ತಿದ್ದಾರೆ.