` ನಟ ಭಯಂಕರ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ ಸಿದ್ದು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಟ ಭಯಂಕರ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ ಸಿದ್ದು
Natabhayankara Poster

ಪ್ರಥಮ್ ಅವರ ನಟ ಭಯಂಕರ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ಬಿಡುಗಡೆ ಮಾಡಿರೋದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅನ್ನೋದು ವಿಶೇಷ. ಒಂದು ಕಡೆ ರಾಜಕೀಯದ ಒತ್ತಡ.. ದೆಹಲಿಗೆ ಹೋಗಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ತುರ್ತು ಕೆಲಸಗಳ ಮಧ್ಯೆಯೂ ನಟ ಭಯಂಕರ ಪೋಸ್ಟರ್ ರಿಲೀಸ್ ಮಾಡಿದ್ದಾರೆ ಸಿದ್ದರಾಮಯ್ಯ. ಅದಕ್ಕೆ ಕಾರಣ ಪ್ರಥಮ್ ಅನ್ನೋದನ್ನು ಬೇರೆ ಹೇಳಬೇಕಿಲ್ಲ.

ಅಂದಹಾಗೆ ಇದು ಹಾರರ್ ಕಾಮಿಡಿ ಸಿನಿಮಾ. ನಟಭಯಂಕರ ಚಿತ್ರಕ್ಕೆ ಜಾತಸ್ಯಂ ಮರಣಂ ಧ್ರುವಂ ಅನ್ನೋ ಟ್ಯಾಗ್‍ಲೈನ್ ಇದೆ. ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗುತ್ತಿರೋ ನಟಭಯಂಕರನಿಗೆ ಹೆಚ್.ಸಿ.ನೀಲೇಶ್ ಸಹನಿರ್ಮಾಪಕರು. ಚಿತ್ರದಲ್ಲಿ ಒಳ್ಳೆ ಹುಡ್ಗನ ಜೊತೆ ಸಾಯಿಕುಮಾರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಸುಶ್ಮಿತಾ ಜೋಷಿ, ನಿಹಾರಿಕ, ಕುರಿ ಪ್ರತಾಪ್ ಸೇರಿದಂತೆ ಒಳ್ಳೆಯ ತಾರಾಗಣವೇ ಚಿತ್ರದಲ್ಲಿದೆ.