` ಚಿತ್ರಲೋಕ ವೀರೇಶ್`ಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚಿತ್ರಲೋಕ ವೀರೇಶ್`ಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ
ಚಿತ್ರಲೋಕ ವೀರೇಶ್`ಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ

ಪ್ರೆಸ್ ಕ್ಲಬ್ ಕೊಡಮಾಡುವ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಚಿತ್ರಲೋಕ ಡಾಟ್ ಕಾಮ್ ಸಂಪಾದಕರಾದ ಕೆ.ಎಂ.ವೀರೇಶ್ ಅವರಿಗೆ ಸಂದಿದೆ. ಪ್ರೆಸ್ ಕ್ಲಬ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀರೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮಾಧ್ಯಮ ಲೋಕದಲ್ಲಿ ಚಿತ್ರಲೋಕ ವೀರೇಶ್ ಎಂದೇ ಪರಿಚಿತರಾಗಿರುವ ವೀರೇಶ್ ಅವರದ್ದು ಹೆಚ್ಚೂ ಕಡಿಮೆ 3 ದಶಕಗಳ ಪತ್ರಿಕೋದ್ಯಮದ ಅನುಭವ. ಈಗ ಸಂಪೂರ್ಣವಾಗಿ ಸಿನಿಮಾ ಪತ್ರಕರ್ತರಾಗಿರುವ ವೀರೇಶ್ ವೃತ್ತಿಪರ ಫೋಟೋಗ್ರಾಫರ್ ಕೂಡಾ ಹೌದು. ಇವರ ಫೋಟೋ ಎಕ್ಸಿಬಿಷನ್ ಏಷ್ಯಾ ಮತ್ತು ಭಾರತದ ಮಟ್ಟದಲ್ಲಿ ಲಿಮ್ಕಾ ದಾಖಲೆ ಸೇರಿವೆ. ಕ್ರೈಂ ವರದಿಗಾರಿಕೆಯಲ್ಲೂ ಹೆಸರು ಮಾಡಿರುವ, ಕ್ರೀಡಾ ಪತ್ರಿಕೋದ್ಯಮದಲ್ಲಿಯೂ ಸಾಧನೆ ಮಾಡಿರುವ ವೀರೇಶ್, ಈಗ  ಸಿನಿಮಾ ಪತ್ರಕರ್ತರಾಗಿ ಮುಂದುವರೆದಿದ್ದಾರೆ. ಉದಯವಾಣಿ, ರೂಪತಾರಾ, ಹಾಯ್ ಬೆಂಗಳೂರು, ಕನ್ನಡ ಪ್ರಭ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಪತ್ರಕರ್ತರಾಗಿದ್ದ ವೀರೇಶ್ ಈಗ ಚಿತ್ರಲೋಕ ಡಾಟ್ ಕಾಂನ ಸಂಪಾದಕರು. ಭಾರತದಲ್ಲಿ ಗೂಗಲ್ ಕಣ್ಣುಬಿಡುವ ಮೊದಲೇ ಚಿತ್ರಲೋಕ ವೆಬ್‍ಸೈಟ್ ಆರಂಭಿಸಿದ ಹಿರಿಮೆ ಇವರದ್ದು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿರುವ ದೇಶದ ಏಕೈಕ ವೆಬ್‍ಸೈಟ್ ಪೋರ್ಟಲ್ ಚಿತ್ರಲೋಕ ಡಾಟ್ ಕಾಮ್. ಹೀಗೆ ಸಾಧನೆಯ ಇತಿಹಾಸವಿರುವ ಪತ್ರಿಕೋದ್ಯಮದಲ್ಲಿ ಹತ್ತು ಹಲವು ವಿಶೇಷ ಸಾಧನೆ ಮಾಡಿರುವ ವೀರೇಶ್ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಘೋಷಿಸಿ ಗೌರವಿಸಿದೆ.

ವೀರೇಶ್ ಅವರೊಂದಿಗೆ ಸುವರ್ಣ ನ್ಯೂಸ್ ಕನ್ನಡ ಪ್ರಭದ ಹಿರಿಯ ಪತ್ರಕರ್ತ ಪ್ರಶಾಂತ್ ನಾಥು, ಭಾಸ್ಕರ್ ರಾವ್ ಎಂ.ಕೆ., ಪದ್ಮರಾಜ ದಂಡವತಿ, ರಂಜಾನ್ ದರ್ಗಾ, ಕೆಸ್ತೂರು ಗುಂಡಪ್ಪ ವಾಸುಕಿ, ಡಾ.ಜಗದೀಶ್ ಕೊಪ್ಪ ಎನ್., ಬಾಲಸುಬ್ರಹ್ಮಣ್ಯಂ ಕೆ.ಆರ್., ಬಿ.ವಿ.ಶಿವಶಂಕರ್, ಯತೀಶ್ ಕುಮಾರ್ ಜಿ.ಡಿ., ಸುದರ್ಶನ್ ಚೆನ್ನಂಗಿಹಳ್ಳಿ, ದೊಡ್ಡ ಬೊಮ್ಮಯ್ಯ, ವಾಸಂತಿ ಹರಿಪ್ರಕಾಶ್, ಪ್ರಕಾಶ್ ಬೆಳವಾಡಿ, ಎಸ್.ಎಚ್.ಮಾರುತಿ ಹಾಗೂ ಭಾನುಪ್ರಕಾಶ್ ಕೂಡಾ ಈ ವರ್ಷದ ಪ್ರೆಸ್ ಕ್ಲಬ್ ವಾರ್ಷಿಕ ಸಾಧನೆ ಪ್ರಶಸ್ತಿ ಪುರಸ್ಕøತರು.

ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನೀಡಲಾಗಿದ್ದರೆ, ಕೊರೊನಾ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದ ಸಚಿವ ಡಾ.ಕೆ.ಸುಧಾಕರ್ ಅವರಿಗೆ ವಿಶೇಷ ಸನ್ಮಾನವಿತ್ತು. ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ ಅವರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಗೌರವ ಸ್ವೀಕರಿಸಿದರು.

ಚಿತ್ರಲೋಕ ವೀರೇಶ್ ಅವರಿಗೆ ಶುಭಾಶಯಗಳು.