` ನಟ ಚೇತನ್ ಅಹಿಂಸಾ ಅರೆಸ್ಟ್. ನ್ಯಾಯಾಂಗ ಬಂಧನ : ಪ್ರಕರಣದ ಕಂಪ್ಲೀಟ್ ವಿವರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಟ ಚೇತನ್ ಅಹಿಂಸಾ ಅರೆಸ್ಟ್. ನ್ಯಾಯಾಂಗ ಬಂಧನ : ಪ್ರಕರಣದ ಕಂಪ್ಲೀಟ್ ವಿವರ
Aa Dinagalu Chethan

ಆ ದಿನಗಳು ಖ್ಯಾತಿಯ ನಟ ಚೇತನ್, ಸಿನಿಮಾ ರಂಗಕ್ಕಿಂತ ಹೆಚ್ಚಾಗಿ ಹೋರಾಟಗಳಲ್ಲೇ ಗುರುತಿಸಿಕೊಂಡವರು. ಈಗ ಚೇತನ್ ಅವರ ಬಂಧನವಾಗಿದೆ. ಚೇತನ್ ಅವರನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರು ಪಡಿಸಿದ ಪೊಲೀಸರು ಚೇತನ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಚೇತನ್ ಅವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಏನಿದು ಪ್ರಕರಣ?

ಸದ್ಯಕ್ಕೆ ಇಡೀ ಕರ್ನಾಟಕವನ್ನು ಕಾಡುತ್ತಿರುವುದು ಹಿಜಾಬ್ ವಿವಾದ ಪ್ರಕರಣ. ಇದು ಹೈಕೋರ್ಟ್ ತ್ರಿಸದಸ್ಯ ಪೀಠದಲಿಲದೆ. ಈ ತ್ರಿಸದಸ್ಯ ಪೀಠದಲ್ಲಿರುವ ನ್ಯಾ.ಕೃಷ್ಣ ದೀಕ್ಷಿತ್ ಅವರ ಹಿಂದಿನ ಪ್ರಕರಣವೊಂದನ್ನು ಉಲ್ಲೇಖಿಸಿ ಚೇತನ್ ಟ್ವೀಟ್ ಮಾಡಿದ್ದರು. ತಾವು ಆಗ ಮಾಡಿದ್ದ ಟ್ವೀಟ್‍ನ್ನು ಮತ್ತೆ ತೆಗೆದುಕೊಂಡು ಇಂತಹವರಿಂದ ಹಿಜಾಬ್ ಪ್ರಕರಣಕ್ಕೆ ನ್ಯಾಯ ಸಿಗುತ್ತಾ ಎಂದು ಪ್ರಶ್ನಿಸಿದ್ದರು. ಪ್ರಕರಣದ ಬಗ್ಗೆ ಸುಮೊಟೊ ಕೇಸ್ ದಾಖಲಿಸಿದ ಪೊಲೀಸರು ಚೇತನ್ ಅವರನ್ನು ಬಂಧಿಸಿದ್ದಾರೆ. ಚೇತನ್ ಅವರ ಟ್ವೀಟ್ ಮುಸ್ಲಿಮರನ್ನು ಪ್ರಚೋದಿಸುವಂತಿದೆ ಎನ್ನವುದು ಪೊಲೀಸ್ ಎಫ್‍ಐಆರ್‍ನಲ್ಲಿದೆ. ಶಾಂತಿಭಂಗಕ್ಕೆ ಪ್ರಚೋದನೆ ಹಾಗೂ ನ್ಯಾಯಮೂರ್ತಿಗಳಿಗೆ ಅವಮಾನ ಪ್ರಕರಣಗಳಲ್ಲಿ ಚೇತನ್ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಚೇತನ್ ಅವರನ್ನು ಅರೆಸ್ಟ್ ಮಾಡುವ ಬಗ್ಗೆ ನೋಟಿಸ್ ನೀಡಿಲ್ಲ. ವಿಚಾರಣೆ ಮಾಡಿಲ್ಲ. ಇದು ಅಕ್ರಮ ಎಂದು ಚೇತನ್ ಬೆಂಬಲಿಗರು ಶೇಷಾದ್ರಿಪುರಂ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಚೇತನ್ ಅವರ ಪತ್ನಿ ಮೇಘಾ ಚೇತನ್ ಅವರನ್ನು ಪೊಲೀಸರೇ ಕಿಡ್ನಾಪ್ ಮಾಡಿದ್ದಾರೆ ಎಂದು ಫೇಸ್‍ಬುಕ್ ಲೈವ್‍ಗೆ ಬಂದು ಹೇಳಿದರು. ನಂತರ ದೂರನ್ನೂ ಕೊಟ್ಟರು.

ಚೇತನ್ ಅವರಿಗೆ ಜಾಮೀನು ನೀಡುವಂತೆ ವಕೀಲ ಕೆ.ಬಾಲನ್ ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಚೇತನ್ ಅವರ ಹೋರಾಟಕ್ಕೆ ನನ್ನ ಬೆಂಬಲ ಇದೆ. ಅವರು ಆತ್ಮವಿಶ್ವಾಸದಿಂದಲೇ ಇದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದಿದ್ದಾರೆ ಮೇಘಾ