ಮೊನ್ನೆ ಮೊನ್ನೆಯಷ್ಟೇ ಶಿವ 143 ಚಿತ್ರದ ಹಾಡು ರಿಲೀಸ್ ಆಗಿತ್ತು. ಮೂರೂಮುಕ್ಕಾಲು ನಿಮಿಷದ ಹಾಡಿನುದ್ದಕ್ಕೂ ಧಿರೇನ್ ಮತ್ತು ಮಾನ್ವಿತಾ ಮುತ್ತಿನ ಮೇಲೆ ಮುತ್ತು ಕೊಟ್ಟುಕೊಂಡು ಮತ್ತೇರಿಸಿದ್ದರು. ಈಗ ಟ್ರೇಲರ್ ಬಂದಿದೆ. ಟ್ರೇಲರಿನಲ್ಲಿರೋದು ಮುತ್ತಿನ ಮಳೆಯಲ್ಲ.. ರೌದ್ರಭಯಂಕರ ಎನ್ನಿಸುವ ಎಮೋಷನ್ಸ್.
ನಾಯಕನ ಆಕ್ರೋಶ.. ಶುಭ ಕಾರ್ಯವನ್ನು ನಿಲ್ಲಿಸೋಕೆ ಪ್ರಯತ್ನಿಸುವ ನಾಯಕ.. ಶಿವ ಮತ್ತು ಮಧು ಇಬ್ಬರ ಪ್ರೀತಿ.. ಕೊನೆಯಲ್ಲಿ ಬರೋ ನಿಮ್ಮಮ್ಮನ್ ಡೈಲಾಗ್.. ವಿಚಿತ್ರ ಕುತೂಹಲ ಹುಟ್ಟಿಸಿದರೆ.. ಅದು ಕಥೆಯ ತಾಕತ್ತು. ಈ ವಯೊಲೆಂಟ್ ಪ್ರೇಮ್ ಕಹಾನಿಯಲ್ಲಿ ಮುತ್ತಿನ ಮತ್ತು ಬರೋದು ಎಲ್ಲಿ..? ರಾಜ್ ಮೊಮ್ಮಗ `ಮುತ್ತು'ರಾಜನಾಗೋದು ಯಾಕೆ? ಕೆಂಡ ಸಂಪಿಗೆ, ನೋಡುವವರ ಮೈಯೆಲ್ಲ ಬೆಚ್ಚಗಾಗಿಸೋದು ಏಕೆ ಅನ್ನೋ ಪ್ರಶ್ನೆಗೆಲ್ಲ ಉತ್ತರ ಪಡೆಯೋಕೆ ಶಿವ 143ಯನ್ನೇ ಕಾಯಬೇಕು.
ಅನಿಲ್ ಕುಮಾರ್ ನಿರ್ದೇಶನದ ಶಿವ 143, ರಾಮ್‍ಕುಮಾರ್ ಅವರ ಮಗ ಧಿರೇನ್ ಅವರಿಗೆ ಮೊದಲ ಸಿನಿಮಾ. ಮಾನ್ವಿತಾ ಇಷ್ಟೊಂಡು ಬೋಲ್ಡ್ ಆಗಿ ನಟಿಸಿರೋ ಮೊದಲ ಸಿನಿಮಾ. ಜಯಣ್ಣ ಭೋಗೇಂದ್ರ, ಡಾ.ಸೂರಿ ನಿರ್ಮಾಣದ ಶಿವ 143 ಚಿತ್ರದ ಟ್ರೇಲರ್‍ನ್ನು ಶಿವಣ್ಣ ಕೂಡಾ ಮೆಚ್ಚಿದ್ದಾರೆ.