` ಹಂಟರ್ ಫಸ್ಟ್ ಲುಕ್ ಬಿಡುಗಡೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಹಂಟರ್ ಫಸ್ಟ್ ಲುಕ್ ಬಿಡುಗಡೆ
Hunter Movie Image

ಹಂಟರ್. ಇದು ನಿರಂಜನ್ ಸುಧೀಂದ್ರ ನಟಿಸುತ್ತಿರೋ ಸಿನಿಮಾ. ನಿರಂಜನ್ ಅವರ ಮೊದಲ ಸಿನಿಮಾ ಸೂಪರ್ ಸ್ಟಾರ್ ಚಿತ್ರದ ಮೇಕಿಂಗ್ ಚುರುಕಾಗಿ ನಡೆಯುತ್ತಿದೆ. 3ನೇ ಸಿನಿಮಾ ಕ್ಯೂ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಹೀಗಿರುವಾಗಲೇ ನಿರಂಜನ್ ಅವರ 2ನೇ ಸಿನಿಮಾ ಹಂಟರ್ ಚಿತ್ರದ ಫಸ್ಟ್ ಲುಕ್ ಬಂದಿದೆ. ಅಣ್ಣನ ಮಗನ ಚಿತ್ರದ ಟೀಸರ್ ರಿಲೀಸ್ ಮಾಡಿ ಶುಭ ಕೋರಿದ್ದು ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ.

ಹಂಟರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ಸೀಜರ್ ಖ್ಯಾತಿಯ ವಿನಯ್ ಕೃಷ್ಣ. ನಿರಂಜನ್ ಸಾಫಲ್ಯ ನಿರ್ಮಾಣದ ಚಿತ್ರಕ್ಕೆ ಸೌಮ್ಯಾ ಮೆನನ್ ನಾಯಕಿ. ಮಲಯಾಳಿ ಹುಡುಗಿ. ನಿರಂಜನ್ ಜೊತೆಗೆ ಈ ಚಿತ್ರದಲ್ಲಿ ಪ್ರಕಾಶ್ ರೈ, ನಾಸರ್, ಸುಮನ್ ಮೊದಲಾದ ಘಟಾನುಘಟಿಗಳು ನಟಿಸುತ್ತಿದ್ದಾರೆ.

ಮೊದಲನೇ ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲೇ ಇನ್ನೂ 2 ಸಿನಿಮಾ ಒಪ್ಪಿಕೊಂಡಿರೋ ನಿರಂಜನ್ ಸಿಕ್ಕಾಪಟ್ಟೆ ಬ್ಯುಸಿ.