ದಾನಿಷ್ ಸೇಠ್ ಈಗ ಥಿಯೇಟರಿಗೆ ಬರುತ್ತಿದ್ದಾರೆ. ಇತ್ತೀಚೆಗೆ ದಾನಿಷ್ ಸೇಠ್ ನಟಿಸಿದ್ದ ಒಂದು ವೆಬ್ ಸಿರೀಸ್ ಮತ್ತು ಇನ್ನೊಂದು ಸಿನಿಮಾ ಎರಡೂ ರಿಲೀಸ್ ಆಗಿದ್ದು ಒಟಿಟಿಯಲ್ಲೇ. ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ವೆಬ್ ಸಿರೀಸ್ ಮತ್ತು ಒನ್ ಕಟ್ ಟೂ ಕಟ್ ಸಿನಿಮಾ.. ಎರಡನ್ನೂ ಒಟಿಟಿಯಲ್ಲಿ ಮೆಚ್ಚಿಕೊಂಡಿದ್ದ ಪ್ರೇಕ್ಷಕರಿಗೆ ಥ್ರಿಲ್ ಕೊಡೋಕೆ ಥ್ರಿಲ್ಲರ್ ಸಿನಿಮಾ ಮೂಲಕ ಬರುತ್ತಿದ್ದಾರೆ ದಾನಿಷ್ ಸೇಠ್. ಸೋಲ್ಡ್ ಚಿತ್ರದ ಮೂಲಕ.
ಇದುವರೆಗೆ ಕಾಮಿಡಿ ಶೇಡ್ ಇರುವ ಪಾತ್ರಗಳಲ್ಲೇ ನಟಿಸುತ್ತಿದ್ದ ದಾನಿಷ್, ಸೋಲ್ಡ್ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿದ್ದಾರೆ. ಅಂದಹಾಗೆ ಇದು ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್. ಡೈರೆಕ್ಟರ್ ಪ್ರೇರಣಾ ಅಗರ್'ವಾಲ್. ಮಾನವ ಕಳ್ಳಸಾಗಣಿಕೆ ಕಥೆಯಿರೋ ಚಿತ್ರದಲ್ಲಿ ಕಾವ್ಯಾ ಶೆಟ್ಟಿ ರುಚಿತಾ ಅನ್ನೋ ಜರ್ನಲಿಸ್ಟ್ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ಮಾಣ ಮಾಡಿರೋ ದೀಪಂ ಕೊಹ್ಲಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಾರ್ಚ್ 4ಕ್ಕೆ ರಿಲೀಸ್ ಆಗುತ್ತಿದೆ ಸೋಲ್ಡ್.