` ಸೈತಾನ್ ಸೈನ್ಯದಲ್ಲಿ ಅನುಶ್ರೀ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸೈತಾನ್ ಸೈನ್ಯದಲ್ಲಿ ಅನುಶ್ರೀ
Anchor Anushree

ಸದಾ ನಗ್ತಾ ನಗಿಸ್ತಾ ಇರೋ ಅನುಶ್ರೀಗೂ ಸೈತಾನ್ ಗೂ ಏನ್ ಸಂಬಂಧ ಎನ್ನಬೇಡಿ. ಸಂಬಂಧ ಇದೆ. ಸೈತಾನ್ ಸೈನ್ಯಕ್ಕೀಗ ಅನುಶ್ರೀಯೇ ರಾಣಿ. ನಾಯಕಿ ಎಲ್ಲ.. ಇದು ಲೋಹಿತ್ ಸಿನಿಮಾ. ಹಾರರ್ ಸಬ್ಜೆಕ್ಟ್.

ಉಪ್ಪು ಹುಳಿ ಖಾರದ ನಂತರ ಸುದೀರ್ಘ ಗ್ಯಾಪ್ ತೆಗೆದುಕೊಂಡು ಟಿವಿಗೇ ಸೀಮಿತರಾಗಿದ್ದ ಅನುಶ್ರೀ ಈಗ ಮತ್ತೆ ವಾಪಸ್ ಆಗಿದ್ದಾರೆ. ಮನಸ್ಸಿಗೆ ತುಂಬಾ ಹತ್ತಿರವಾದ ಕಥೆ ಮತ್ತು ಪಾತ್ರ. ಹಾಗಾಗಿಯೇ ಒಪ್ಪಿಕೊಂಡೆ ಅಂತಾರೆ ಅನುಶ್ರೀ. ದೆವ್ವಗಳಿಗೇ ಗುಡಿ ಕಟ್ಟಿ ಪೂಜಿಸುವವರ ಸುತ್ತ ಹೆಣೆದಿರೋ ಕಥೆಯಂತೆ ಇದು. ಈ ಚಿತ್ರದ ಮೂಲಕ ಪಾರ್ಥಿಬನ್ ಅನ್ನೋ ಉದ್ಯಮಿ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಈ ಚಿತ್ರ ಲೋಹಿತ್ ಅವರ ಬ್ಯಾನರಿನಲ್ಲಿ ಬರುತ್ತಿದೆ. ಲೋಹಿತ್ ಅವರ ಬಳಿ ಅಸಿಸ್ಟೆಂಟ್ ಆಗಿದ್ದ ಪ್ರಭಾಕರ್ ಈ ಚಿತ್ರಕ್ಕೆ ಡೈರೆಕ್ಟರ್.