ಮೋಹಕ ತಾರೆ ರಮ್ಯಾ ನಟಿಸಿದ್ದ ಕೊನೆಯ ಸಿನಿಮಾ ಆರ್ಯನ್. ಕೊನೆಯದಾಗಿ ತೆರೆ ಮೇಲೆ ಕಾಣಿಸಿದ್ದು ನಾಗರಹಾವು ಚಿತ್ರದಲ್ಲಿ. ಅದಕ್ಕೂ ಸುಮಾರು 2 ವರ್ಷ ಮೊದಲೇ ಸಿನಿಮಾದಿಂದ ವಿಮುಖರಾಗುತ್ತಿದ್ದ ರಮ್ಯಾ 2014ರ ನಂತರ ನಟಿಸಿಲ್ಲ. ನಾಗರಹಾವು ರಿಲೀಸ್ ಆಗಿದ್ದು 2016ರಲ್ಲಾದರೂ ರಮ್ಯಾ ಆ ಚಿತ್ರದಲ್ಲಿ ನಟಿಸಿ ಯಾವುದೋ ಕಾಲವಾಗಿತ್ತು. ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋಗಿ, ಮಂಡ್ಯದ ಸಂಸದೆಯಾಗಿ, ಕಾಂಗ್ರೆಸ್ ವಕ್ತಾರರಾಗಿ ದೇಶದಾದ್ಯಂತ ಸದ್ದು ಮಾಡಿದ್ದ ರಮ್ಯಾ ಈಗ ಮತ್ತೆ ಬರುತ್ತಿದ್ದಾರೆ.
ನಾನು ಒಂದಷ್ಟು ಕಥೆ ಕೇಳುತ್ತಿದ್ದೇನೆ. ಶೀಘ್ರದಲ್ಲಿಯೇ ನಾನೇ ಅಧಿಕೃತವಾಗಿ ಹೇಳುತ್ತೇನೆ. ಅಲ್ಲಿಯವರೆಗೂ ಬರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದಿದ್ದಾರೆ ರಮ್ಯಾ. ಅಲ್ಲಿಗೆ ರಮ್ಯಾ ಚಿತ್ರರಂಗಕ್ಕೆ ಬರೋದು ಪಕ್ಕಾ ಆಗಿದೆ. ನಿರ್ಮಾಪಕಿಯಾಗಿ ಬರುತ್ತಾರೋ.. ನಾಯಕಿಯಾಗಿ ಬರುತ್ತಾರೋ ಅನ್ನೋ ಕುತೂಹಲವಿದೆ ಅಷ್ಟೆ.
ಒಂದು ಮೂಲದ ಪ್ರಕಾರ ಈಗ ದೇಶದ ಪ್ರತಿಷ್ಠಿತ ಬ್ಯಾನರ್‍ಗಳಲ್ಲಿ ಒಂದಾಗಿರುವ ಕರ್ನಾಟಕದ ಹೆಮ್ಮೆಯ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರೋ ಹೊಸ ಚಿತ್ರದಲ್ಲಿ ರಮ್ಯಾ ನಟಿಸಲು ಒಪ್ಪಿದ್ದಾರೆ. ಮಾಚ್ ಮಧ್ಯಂತರ ಅಥವಾ ಏಪ್ರಿಲ್`ನಲ್ಲಿ ಅದು ಅಧಿಕೃತವಾಗಲಿದೆ.