ಬಡವ ರಾಸ್ಕಲ್, 2021ರ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ನಿರ್ಮಾಪಕರಾಗಿ ಮೊದಲ ಪ್ರಯತ್ನದಲ್ಲಿಯೇ ಭರ್ಜರಿ ಯಶಸ್ಸು ಕಂಡ ಡಾಲಿ ಧನಂಜಯ್ ಈಗ ಚಿತ್ರವನ್ನು ತೆಲುಗಿಗೂ ಕೊಂಡೊಯ್ಯುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿ ಕನ್ನಡದಲ್ಲಿ 50 ದಿನ ಪೂರೈಸಿರುವ ಸಂಭ್ರಮದ ನಡುವೆ ಅಲ್ಲಿಗೆ ಹೋಗುತ್ತಿದೆ ಬಡವ ರಾಸ್ಕಲ್. ತೆಲುಗಿನಲ್ಲೂ ಇದೇ ಟೈಟಲ್. ಬಡವ ರಾಸ್ಕಲ್.
ಡಾಲಿ ತೆಲುಗರಿಗೆ ಹೊಸಬರೇನಲ್ಲ. ಈ ಹಿಂದೆ ವರ್ಮಾ ಜೊತೆ ಭೈರವ ಗೀತ ಸಿನಿಮಾ ಮಾಡಿದ್ದರು. ಇತ್ತೀಚೆಗೆ ಪುಷ್ಪದಲ್ಲೂ ಮಿಂಚಿದ್ದಾರೆ. ಅದೇ ಪ್ರೀತಿಗಾಗಿ ರಾಮ್ ಗೋಪಾಲ್ ವರ್ಮ, ಡಾಲಿ ಜೊತೆ ನಿಂತು ಬಡವ ರಾಸ್ಕಲ್ ಪ್ರಚಾರ ಮಾಡಿದ್ದಾರೆ.
ಬಡವ ರಾಸ್ಕಲ್ ಅನ್ನೋ ಬೈಗುಳ ಅಣ್ಣಾವ್ರ ಬಾಯಲ್ಲಿ ಕೇಳೋದೋ ಸೊಗಸಾಗಿತ್ತು. ಹೀಗಾಗಿ ಅದನ್ನೇ ಟೈಟಲ್ ಆಗಿಟ್ಟೆವು. ಅದೊಂದು ಮುದ್ದಾದ ಬೈಗುಳ. ತೆಲುಗಿನಲ್ಲೂ ಅದೇ ಅರ್ಥ. ತಮಿಳಿನಲ್ಲೂ ಅದೇ ಅರ್ಥ. ಕ್ಯಾರೆಕ್ಟರ್‍ನಲ್ಲಿ ನೆಗೆಟಿವ್ ಅಂಶಗಳಿರೋವಾಗ ಒಳ್ಳೆ ಹುಡುಗ ಅನ್ನೋ ಟೈಟಲ್ ಇಡೋಕಾಗುತ್ತಾ ಎಂದಿರೋ ಧನಂಜಯ್ ಈಗ ತೆಲುಗಿನಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.