ಬೈಟುಲವ್ ಚಿತ್ರದ ಅದೊಂದು ಪೋಸ್ಟರ್ ಭರ್ಜರಿ ಸದ್ದು ಮಾಡಿತ್ತು. ಮಗು ಎತ್ತಿಕೊಂಡಿದ್ದ ಧನ್ವೀರ್-ಶ್ರೀಲೀಲಾ ಹಸೆಮಣೆ ಮೇಲೆ ಕುಳಿತಿದ್ದ ಪೋಸ್ಟರ್ ಅದು. ಆ ಮಗುವಿನ ಹಾಡನ್ನು ಹೊರಬಿಟ್ಟು ಖುಷಿಯಾಗಿದೆ ಬೈಟುಲವ್ ಜೋಡಿ.
ನೀನೇ ನೀನೇ ನನ್ನಾ ಜಗವು
ನನ್ನಾ ಎದೆಯಾ ಕದವು ನೀನೇ..
ಎಂಬ ಹಾಡು ಮಕ್ಕಳನ್ನು ಮುದ್ದು ಮಾಡುವವರಿಗೆಲ್ಲ ಇಷ್ಟವಾಗುವಂತಿದೆ. ಡಾ.ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿಗೆ ಗಾಯಕ ಕಾರ್ತಿಕ್ ಭಾವ ತುಂಬಿ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವೂ ಇಂಪಾಗಿದೆ. ಹರಿ ಸಂತೋಷ್ ನಿರ್ದೇಶನದ ಬೈಟೂಲವ್ ಮುಂದಿನ ವಾರ ರಿಲೀಸ್ ಆಗುತ್ತಿದೆ.