ಸಿಂಪಲ್ ಸುನಿ ನಿರ್ದೇಶನದ ಹೊಸ ಚಿತ್ರ ರಾಬಿನ್ ಹುಡ್ ಪ್ರೀ-ಪ್ರೊಡಕ್ಷನ್ ಹಂತದಲ್ಲಿತ್ತು. ಹೊಸ ಕಲಾವಿದ ದುಶ್ಯಂತ್ ಅವರನ್ನು ಹೀರೋ ಆಗಿ ಲಾಂಚ್ ಮಾಡುತ್ತಿರುವ ಸುನಿ ದುಶ್ಯಂತ್ ಅವರಿಗೆ ನೀನಾಸಂ ಟೀಚರ್ ಒಬ್ಬರಿಂದ ತರಬೇತಿಯನ್ನೂ ಕೊಡಿಸುತ್ತಿದ್ದಾರೆ. ಇದರ ಮಧ್ಯೆ ರಾಬಿನ್ ಹುಡ್ ಚಿತ್ರಕ್ಕೆ ಬ್ರೇಕ್ ಹಾಕಿದ್ದಾರೆ ಅನ್ನೋ ಸುದ್ದಿ ಬಂದಿದೆ.
ರಾಬಿನ್ ಹುಡ್ ಬಜೆಟ್ ದೊಡ್ಡದು ಹಾಗೂ ಪ್ಯಾನ್ ಇಂಡಿಯಾ ಸಿನಿಮಾ. ಆದರೆ ಸದ್ಯದ ಮಟ್ಟಿಗೆ ಆ ಪ್ರಾಜೆಕ್ಟ್ನ್ನು ಸೈಡಿಗಿಟ್ಟು, ಬೇರೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಹಾಗಂತ ಹೀರೋ ಚೇಂಜ್ ಆಗಿಲ್ಲ. ದುಶ್ಯಂತ್ ಜೊತೆಯಲ್ಲೇ ಸಿನಿಮಾ ಮಾಡಲಿದ್ದಾರೆ. ಆದರೆ ಅದು ಲವ್ ಕಾಮಿಡಿ ಸಬ್ಜೆಕ್ಟ್ ಸಿನಿಮಾ. ಅಧಿಕೃತ ಸುದ್ದಿಗೆ ಏಪ್ರಿಲ್ವರೆಗೂ ಕಾಯಬೇಕಂತೆ.