ಕಿಸ್ ಮೂಲಕ ಕನ್ನಡಿಗರ ಮನಗೆದ್ದ ಶ್ರೀಲೀಲಾ ಪೆಳ್ಳಿಸಂದಡಿ ಚಿತ್ರದಿಂದ ತೆಲುಗಿನಲ್ಲೂ ಚೆಂದದ ಹುಡುಗಿಯಾಗಿ ಗುರುತಿಸಿಕೊಂಡರು. ಇತ್ತ ಕನ್ನಡದಲ್ಲಿ ಅವರ ಬೈ ಟು ಲವ್ ರಿಲೀಸ್ ಆಗುತ್ತಿದ್ದರೆ ಅತ್ತ ತೆಲುಗಿನಲ್ಲಿ ಮಹೇಶ್ ಬಾಬು ಚಿತ್ರಕ್ಕೆ ಸೈನ್ ಹಾಕುವ ಖುಷಿಯಲ್ಲಿದ್ದಾರೆ.
ಮಹೇಶ್ ಬಾಬು ಸರ್ಕಾರಿ ವಾರು ಪಾಟ ನಂತರ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ ಈಗಾಗಲೇ ಆಯ್ಕೆಯಾಗಿದ್ದಾರೆ. ಇನ್ನೊಬ್ಬ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರಂತೆ. ಮಾತುಕತೆ ಫೈನಲ್ ಹಂತದಲ್ಲಿದೆ. ಪೂಜಾ ಮತ್ತು ಶ್ರೀಲೀಲಾ ಇಬ್ಬರೂ ಕನ್ನಡದವರೇ ಎನ್ನುವುದು ವಿಶೇಷ.