ಗುರು ಶಿಷ್ಯರು. ಇತ್ತೀಚೆಗಷ್ಟೇ ಚಿತ್ರದ ಪುಟ್ಟ ಪುಟ್ಟ ಮಕ್ಕಳ ಪಾತ್ರಗಳನ್ನು ಪರಿಚಯ ಮಾಡಿಕೊಡಲಾಗಿದೆ. ಚಿತ್ರದಲ್ಲಿ ಶರಣ್ ಪಿಟಿ ಮಾಸ್ಟರ್ ಆಗಿ ನಟಿಸಿದ್ದಾರೆ. ಖೋಖೋ ಕಲಿಸ್ತಾರಂತೆ. ಖೋಖೋ ಕಲಿಸ್ತಾರಂತೆ ಅಂದ್ಮೇಲೆ ಖೋಖೋ ಹುಡುಗರ ಟೀಂ ಕೂಡಾ ಇರಬೇಕಲ್ವಾ? ಈಗ ಬಿಟ್ಟಿರೋ 13 ಹುಡುಗರ ಟೀಂ ಅದೇ. ಆದರೆ ವಿಶೇಷವೇನು ಗೊತ್ತೇ..? ಇವರೆಲ್ಲ ಸ್ಟಾರ್ ನಟರ ಮಕ್ಕಳು. 13ರಲ್ಲಿ 6 ಜನ ಕಲಾವಿದರ ಮಕ್ಕಳೇ..
ಸ್ವತಃ ಶರಣ್ ತಮ್ಮ ಪುತ್ರ ಹೃದಯ್‍ನನ್ನು ತೆರೆಗೆ ತರುತ್ತಿದ್ದಾರೆ. ನೆನಪಿರಲಿ ಪ್ರೇಮ್ ಪುತ್ರ ಏಕಾಂತ್, ನಟ ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್ ಹಾಗೂ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಇಲ್ಲಿ ನಟಿಸುತ್ತಿದ್ದಾರೆ. ಶಾಸಕ ರಾಜುಗೌಡ ಪುತ್ರ ಮಣಿಕಾಂತ್ ನಾಯಕ್ ಕೂಡಾ ಇಲ್ಲಿ ನಟಿಸುತ್ತಿರೋದು ಇನ್ನೊಂದು ಸ್ಪೆಷಲ್.
ಸುಮಾರು 450 ಹುಡುಗರನ್ನು ಅಡಿಷನ್ ಮಾಡಿ ಫೈನಲ್ ಮಾಡಿರೋ 13 ಹುಡುಗರು ಇವರು. ಹಾಗಂತ ಇವರನ್ನು ಸುಮ್ಮನೆ ಆಕ್ಟ್ ಮಾಡಿಸಿಲ್ಲ. ವಿಜಯನಗರ ಖೋಖೋ ಫೆಡರೇಷನ್ ಕ್ಲಬ್‍ಗೆ ಸೇರಿಸಿ ಒಂದು ತಿಂಗಳು ಟ್ರೇನಿಂಗ್ ಕೂಡಾ ಕೊಡಿಸಿದ್ದಾರೆ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್.
ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಗುರು ಶಿಷ್ಯರು ಚಿತ್ರದಲ್ಲಿರೋದು ಖೋಖೋ ಕಥೆಯೇ ಅಂತೆ. ನಿಶ್ವಿಕಾ ನಾಯ್ಡು ಹೀರೋಯಿನ್ ಆಗಿದ್ದು ಲಡ್ಡು ಸಿನಿಮಾಸ್ ಮೂಲಕ ಗುರು ಶಿಷ್ಯರು ರೆಡಿಯಾಗುತ್ತಿದ್ದಾರೆ.