ಶಿವಣ್ಣ ಸಾಮಾನ್ಯವಾಗಿ ಯಾರಿಗೂ ಬುದ್ದಿಮಾತು ಹೇಳೋಕೆ ಹೋಗಲ್ಲ. ಹಾಗಂತ ತಮ್ಮ ಆತ್ಮೀಯರಾದವರನ್ನು ಸುಮ್ಮನೆ ಬಿಡೋದೂ ಇಲ್ಲ. ಆರ್.ಚಂದ್ರು ಮೇಲೂ ಅಂತದ್ದೇ ಒಂದು ಪ್ರೀತಿ ಶಿವಣ್ಣಗೆ ಇದೆ. ಅದು ಮೈಲಾರಿ ಚಿತ್ರ ಕೊಟ್ಟ ಪ್ರೀತಿ. ಈಗ ಚಂದ್ರು ಕಬ್ಜ ಮಾಡುತ್ತಿದ್ದಾರೆ. ಕಬ್ಜ ಸಿನಿಮಾ ಶುರುವಾಗಿ ಹೆಚ್ಚೂ ಕಡಿಮೆ 2 ವರ್ಷಗಳಾಗುತ್ತಾ ಬಂದಿದೆ. ಈಗಾಗಲೇ 120 ದಿನದ ಶೂಟಿಂಗ್ ಮುಗಿದಿದೆ. ಶಿವಣ್ಣ ಚಂದ್ರುಗೆ ಬುದ್ದಿ ಹೇಳೋದಿಕ್ಕೂ ಇದೇ ಕಾರಣ.
ಒಳ್ಳೆಯ ನಿರ್ದೇಶಕರು ನೀವು. ಒಂದೇ ಸಿನಿಮಾಗೆ ವರ್ಷಗಟ್ಟಲೆ ಸಿಕ್ಕಿಕೊಳ್ಳಬೇಡಿ. ಜನ ಸಿನಿಮಾಗಾಗಿ ಕಾಯುತ್ತಿದ್ದಾರೆ. ಆದಷ್ಟು ಬೇಗ ಸಿನಿಮಾ ಮುಗಿಸಿ. ನಿಮ್ಮಂತಹವರು ಇನ್ನೂ 10 ಸಿನಿಮಾ ಮಾಡಬೇಕು. ಸ್ವಲ್ಪ ಫಾಸ್ಟ್ ಆಗಿ ಎಂದಿದ್ದಾರೆ ಶಿವಣ್ಣ.
ಸಲಗ ಚಿತ್ರದ ಸಕ್ಸಸ್ ಮೀಟ್‍ನಲ್ಲಿ ಮಾತನಾಡಿರೋ ಶಿವಣ್ಣ ಚಂದ್ರು ಬೇಗ ಸಿನಿಮಾ ಮುಗಿಸಬೇಕು ಎಂದಿದ್ದಾರೆ. ಇತ್ತ ಕಬ್ಜ ಚಿತ್ರಕ್ಕೆ ಇನ್ನೂ ನಾಯಕಿಯ ಆಯ್ಕೆ ಫೈನಲ್ ಆಗಿಲ್ಲ. ಶೀಘ್ರದಲ್ಲೇ ನಾಯಕಿಯನ್ನು ಪರಿಚಯಿಸಿ ಕಬ್ಜ ಶೂಟಿಂಗ್ ಮಾಡೋದಾಗಿ ಹೇಳಿದ್ದಾರೆ ಚಂದ್ರು.