` ಹೆತ್ತ ಮಕ್ಕಳೇ ಹೊರಹಾಕಿದ್ದ ನಟ ಅಶ್ವತ್ಥ್ ನಾರಾಯಣ್ ವೃದ್ಧಾಶ್ರಮದಲ್ಲಿ ಸಾವು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹೆತ್ತ ಮಕ್ಕಳೇ ಹೊರಹಾಕಿದ್ದ ನಟ ಅಶ್ವತ್ಥ್ ನಾರಾಯಣ್ ವೃದ್ಧಾಶ್ರಮದಲ್ಲಿ ಸಾವು
Senior Actor Ashwath Narayan

ಕನ್ನಡದಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದ ನಟ ಅಶ್ವತ್ಥ್ ನಾರಾಯಣ್ ವಿಧಿವಶರಾಗಿದ್ದಾರೆ. ಕೆಲವು ತಿಂಗಳ ಹಿಂದೆ ಅಶ್ವತ್ಥ್ ನಾರಾಯಣ್ ಸುದ್ದಿ ಸಂಚಲನ ಮೂಡಿಸಿತ್ತು. ದುಡಿದಿದ್ದ ಆಸ್ತಿಯೆಲ್ಲವನ್ನೂ ಮಕ್ಕಳ ಹೆಸರಿಗೆ ಬರೆದಿದ್ದ ಅಶ್ವತ್ಥ್ ನಾರಾಯಣ್ ಮಕ್ಕಳ ವಿರುದ್ಧವೇ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಮಕ್ಕಳು ತಂದೆಯ ವಿರುದ್ಧವೇ ನಿಂತಿದ್ದರು.

ಪೊಲೀಸರು ಮತ್ತು ಫಿಲಂ ಚೇಂಬರ್ ಸಂಧಾನದಿಂದಲೂ ವಿವಾದ ಬಗೆಹರಿಸಲು ಸಾಧ್ಯವಾಗಿರಲಿಲ್ಲ. ಕೊನೆಗೆ ಪತ್ನಿಯ ಜೊತೆ ಮಾಗಡಿ ರಸ್ತೆಯಲ್ಲಿದ್ದ ವೃದ್ಧಾಶ್ರಮ ಸೇರಿದ್ದರು ಅಶ್ವತ್ಥ್ ನಾರಾಯಣ್. 92 ವರ್ಷ ವಯಸ್ಸಾಗಿದ್ದ ಅಶ್ವತ್ಥ್ ನಾರಾಯಣ್ ಮೃತಪಟ್ಟಿದ್ದಾರೆ.