ರೌಡಿ ಬೇಬಿ ಸಿನಿಮಾ ಇದೇ ಫೆಬ್ರವರಿ 11ಕ್ಕೆ ರಿಲೀಸ್. ಬಿಗ್ ಬಾಸ್ ದಿವ್ಯಾ ಸುರೇಶ್ ಮತ್ತು ಎಸ್.ಎಸ್.ರವಿಗೌಡ ಪ್ರಧಾನ ಪಾತ್ರದಲ್ಲಿರೋ ಚಿತ್ರದ ಟ್ರೇಲರ್‍ನಲ್ಲಿ ರೊಮ್ಯಾನ್ಸ್, ಆ್ಯಕ್ಷನ್ ಮತ್ತು ರೊಮ್ಯಾನ್ಸ್ ತುಂಬಿ ತುಳುಕುತ್ತಿದೆ. ಎಪ್ಪೂರು ಕೃಷ್ಣ ನಿರ್ದೇಶನದ ರೌಡಿ ಬೇಬಿ ಬಗ್ಗೆ ನಿರೀಕ್ಷೆ ಹುಟ್ಟೋಕೆ ಕಾರಣಗಳೂ ಇವೆ.
ಬಿಗ್ ಬಾಸ್ ನಂತರ ದಿವ್ಯಾ ಸುರೇಶ್ ನಟಿಸಿರುವ ಚಿತ್ರ ಇದೇ ಮೊದಲ ಬಾರಿಗೆ ರಿಲೀಸ್ ಆಗುತ್ತಿದೆ. ಚಿತ್ರದ ಟ್ರೇಲರ್ ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದೆ. ಮೈಚಳಿ ಬಿಟ್ಟು ನಟಿಸಿರೋ ದಿವ್ಯಾ ಲಿಪ್‍ಲಾಕ್‍ಗೂ ಹಿಂದೆ ಬಿದ್ದಿಲ್ಲ. ಚಿತ್ರದಲ್ಲಿ ಒಂದಲ್ಲ.. ಎರಡ್ಮೂರು ಲವ್ ಸ್ಟೋರಿಗಳಿವೆ. ನಿರ್ದೇಶಕರು ಚೆಂದದ ಕಥೆ ಹೇಳಿದ್ದರು. ಕಥೆ ಹೇಳಿದ್ದಂತೆಯೇ ಚಿತ್ರ ಮಾಡಿಕೊಟ್ಟಿದ್ದಾರೆ ಎಂಬ ಖುಷಿಯಲ್ಲಿರೋದು ನಿರ್ಮಾಪಕರು.