ಶ್ವೇತಾ ಚೆಂಗಪ್ಪ, ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆ. ಟೆಲಿವಿಷನ್ ಶೋಗಳಲ್ಲಿ ಹೆಚ್ಚು ಗುರುತಿಸಿಕೊಂಡ ಶ್ವೇತಾ ಈಗ ವೇದ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಒಂದೊಳ್ಳೆ ಪಾತ್ರಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ. ಹರ್ಷ ನನಗೆ ಒಳ್ಳೆಯ ಫ್ರೆಂಡ್. ಹರ್ಷ ಹಲವು ಬಾರಿ ಆಫರ್ ಮಾಡಿದ್ದರೂ, ಟಿವಿ ಕಮಿಟ್‍ಮೆಂಟ್‍ಗಳಿಂದಾಗಿ ಒಪ್ಪಿಕೊಳ್ಳೋಕೆ ಆಗಿರಲಿಲ್ಲ. ಆದರೆ ವೇದ ಚಿತ್ರದ ಈ ಪಾತ್ರ ಹೇಳಿದ ಕೂಡಲೇ ನಾನು ಪಾತ್ರಕ್ಕೆ ಕಮಿಟ್ ಆಗಿಬಿಟ್ಟೆ. ಇದನ್ನು ಬಿಡಬಾರದು ಎನ್ನಿಸಿಬಿಟ್ಟಿತು. ಒಪ್ಪಿಕೊಂಡೆ ಎನ್ನುತ್ತಾರೆ ಶ್ವೇತಾ ಚೆಂಗಪ್ಪ.
ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಮಗನನ್ನು ಸುದೀರ್ಘ ಕಾಲ ಬಿಟ್ಟಿದ್ದದ್ದು ಇದೇ ಮೊದಲು ಎಂದು ಮಗನನ್ನು ನೆನಪಿಸಿಕೊಂಡಿದ್ದಾರೆ ಶ್ವೇತಾ ಚೆಂಗಪ್ಪ. ವೇದ ಚಿತ್ರ ಶಿವ ರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ. ಅವರ ವೃತ್ತಿ ಬದುಕಿನ 125ನೇ ಸಿನಿಮಾ. ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ನಿನ ಚಿತ್ರವೆಂದ ಮೇಲೆ ನಿರೀಕ್ಷೆಯೂ ದೊಡ್ಡದಾಗಿಯೇ ಇರುತ್ತೆ.