ಗಾಳಿಪಟ 2 ರಿಲೀಸ್ ಆಗೋಕೆ ಸಿದ್ಧವಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿವೆ. ಯೋಗರಾಜ್ ಭಟ್, ಗಣೇಶ್, ಅನಂತನಾಗ್, ದಿಗಂತ್.. ಎಲ್ಲರೂ 2ನೇ ಬಾರಿಗೆ ಗಾಳಿಪಟ ಹಾರಿಸುತ್ತಿದ್ದರೆ, ಅವರಿಗೆ ಈ ಬಾರಿ ಹೊಸದಾಗಿ ಜೊತೆಯಾಗಿರೋದು ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್. ಇವರೆಲ್ಲರನ್ನೂ ಒಟ್ಟಿಗೇ ಸೇರಿಸಿರುವ ಕೀರ್ತಿ ರಮೇಶ್ ರೆಡ್ಡಿ ಅವರದ್ದು. ಚಿತ್ರವೀಗ ರಿಲೀಸ್ ಆಗೋಕೂ ಮೊದಲೇ ಭರ್ಜರಿ ಬಿಸಿನೆಸ್ ಮಾಡುತ್ತಿದೆ.
ಚಿತ್ರದ ಆಡಿಯೋ ರೈಟ್ಸ್ ಸೇರಿದಂತೆ ಕೆಲವು ಹಕ್ಕುಗಳನ್ನು ಆನಂದ್ ಆಡಿಯೋ ತೆಗೆದುಕೊಂಡಿದೆ. ಸ್ಯಾಟಲೈಟ್ ಮತ್ತು ಒಟಿಟಿ ರೈಟ್ಸ್‍ನ್ನು ಝೀ ಗ್ರೂಪ್ ಖರೀದಿಸಿದೆ. ಇದೆಲ್ಲದರಿಂದ ಒಟ್ಟಾರೆ ಈಗಾಗಲೇ 8 ಕೋಟಿ ಲಾಭದಲ್ಲಿದೆ ಗಾಳಿಪಟ 2 ಟೀಂ. ಇನ್ನು ಮುಂದೆ ಬರೋದು ಬೋನಸ್.
ಅಂದಹಾಗೆ 2008ರಲ್ಲಿ ರಿಲೀಸ್ ಆಗಿದ್ದ ಗಾಳಿಪಟ 25 ಕೋಟಿ ಬಿಸಿನೆಸ್ ಮಾಡಿತ್ತು. ಅದೂ 2008ರಲ್ಲಿ. 25 ವಾರ ಯಶಸ್ವಿಯಾಗಿ ಓಡಿದ್ದ ಸಿನಿಮಾ ಗಾಳಿಪಟ. ಈಗ 2022. ರಿಲೀಸ್ ಆಗೋಕೂ ಮೊದಲೇ ಗಾಳಿಪಟ 2 ಲಾಭ ಮಾಡುತ್ತಿದೆ. ಸಿನಿಮಾ ಮೇ ತಿಂಗಳಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.