2020ರಲ್ಲಷ್ಟೇ ಮದುವೆಯಾಗಿತ್ತು. ನಿಧಿಮಾ ಜೊತೆ. ಆದಿತ್ಯ ಮತ್ತು ನಿಧಿಮಾ ಲವ್ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ವಿಧಿಯಾಟ.. ನಿಧಿಮಾ ದೂರವಾದಳು. ನಿಧಿಮಾ ದೂರವಾಗಿ 2 ವರ್ಷ ಕಳೆಯುವಷ್ಟರ ಹೊತ್ತಿಗೆ ಆದಿತ್ಯನಿಗೆ ಮತ್ತೆ ಮದುವೆಯಾಗೋ ಮನಸ್ಸಾಗಿದೆ. ಈ ಬಾರಿ ಯಾರ ಮೇಲೆ ಲವ್ ಆಗಿದೆ? ನಿಧಿಮಾ ಅಂದ್ರೇನೇ ಪ್ರೀತಿ ಅನ್ನೋ ಆದಿ, ಇನ್ನೊಬ್ಬಳಲ್ಲಿ ಪ್ರೀತಿ ಹುಡುಕಿದನಾ?
ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಹೇಳೋಕೆ ಬರುತ್ತಿದೆ ಲವ್ ಮಾಕ್‍ಟೇಲ್ 2. ಒನ್ಸ್ ಎಗೇನ್ ಇದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಕನಸಿನ ಇನ್ನೊಂದು ಸಿನಿಮಾ. ಕಥೆ, ಚಿತ್ರಕಥೆ, ನಿರ್ದೇಶನ ಕೃಷ್ಣ ಅವರದ್ದೇ. ಈ ಬಾರಿ ನಕುಲ್ ಅಭ್ಯಂಕರ್ ಮ್ಯೂಸಿಕ್ ಹೊಣೆ ಹೊತ್ತಿದ್ದರೆ, ಸಾಹಿತ್ಯ ರಾಘವೇಂದ್ರ ಕಾಮತ್ ಅವರದ್ದು. ಮಿಲನಾ ಅವರಿಂದ ಬೈಸ್ಕೊಂಡ್ ಮೇಲೆ ಟ್ರೇಲರ್ ರಿಲೀಸ್ ಆಗಿದೆ. ಮೊದಲ ಭಾಗದಂತೆಯೇ ಒಂದಿಷ್ಟು ತರಲೆ, ತಮಾಷೆಗಳ ಜೊತೆಯಲ್ಲಿ ಸಾಗುವ ಕಥೆಯಲ್ಲಿ ಭಾವುಕತೆಯನ್ನು ತುಂಬಿ ತುಳುಕಿಸಿರೋ ಸುಳಿವು ಕೊಟ್ಟಿದ್ದಾರೆ ಕೃಷ್ಣ.