` ಅಪ್ಪು ಪಾತ್ರಕ್ಕೆ ಶಿವಣ್ಣಂದೇ ಡಬ್ಬಿಂಗ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಪ್ಪು ಪಾತ್ರಕ್ಕೆ ಶಿವಣ್ಣಂದೇ ಡಬ್ಬಿಂಗ್..!
ಅಪ್ಪು ಪಾತ್ರಕ್ಕೆ ಶಿವಣ್ಣಂದೇ ಡಬ್ಬಿಂಗ್..!

ಜೇಮ್ಸ್ ಚಿತ್ರ ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬದ ದಿನ ರಿಲೀಸ್ ಆಗಬೇಕು. ಅದಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ತಿರೋ ಚಿತ್ರತಂಡ, ಶೂಟಿಂಗ್ ಸಮಯದಲ್ಲಿ ರೆಕಾರ್ಡ್ ಆಗಿದ್ದ ಧ್ವನಿಯನ್ನೇ ಹಲವು ಲ್ಯಾಬ್‍ಗಳಲ್ಲಿ ಕಳಿಸಿ, ಆ ಧ್ವನಿಯನ್ನೇ ಬಳಸಿಕೊಳ್ಳೋ ಪ್ರಯತ್ನ ಮಾಡಿತ್ತು. ಆ್ಯಪ್‍ಗಳಲ್ಲಿ ಅಪ್ಪು ಧ್ವನಿ ಸೆಟ್ ಮಾಡಿಸಿ, ಡಬ್ ಮಾಡುವ ಪ್ರಯತ್ನವನ್ನೂ ಮಾಡಿತ್ತು. ಆದರೆ, ಟೆಕ್ನಿಕಲಿ ಅದ್ಯಾವುದೂ ಸಾಧ್ಯವಾಗಿಲ್ಲ. ಹೀಗಾಗಿ ಶಿವಣ್ಣನೇ ಜೇಮ್ಸ್ ಪಾತ್ರಕ್ಕೆ ಧ್ವನಿ ನೀಡಿದ್ದಾರಂತೆ.

ಜೇಮ್ಸ್ ಚಿತ್ರದ ಅಪ್ಪು ಪಾತ್ರಕ್ಕೆ ಧ್ವನಿ ನೀಡೋಕೆ ನಾನು ಸಿದ್ಧ ಎಂದು ಸ್ವತಃ ಶಿವಣ್ಣ ಹೇಳಿದ್ದರು. ಅದರಂತೆಯೇ ಶಿವಣ್ಣ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಸುಮಾರು 4 ಗಂಟೆ ಕಾಲ ಡಬ್ಬಿಂಗ್ ಮಾಡಿದ್ದಾರಂತೆ ಶಿವಣ್ಣ.

ಜೇಮ್ಸ್ ಚಿತ್ರದ ಪ್ರಚಾರವನ್ನೂ ತಾವು ಮಾಡಿಕೊಡೋದಾಗಿ ಹೇಳಿದ್ದರು ಶಿವಣ್ಣ. ನನಗೆ ಈಗ ಶಿವಣ್ಣನೇ ಗಾಡ್‍ಫಾದರ್ ಎಂದಿದ್ದರು ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಅಂದಹಾಗೆ ಅಪ್ಪು ನಟನೆಯ ಕೊನೆಯ ಸಿನಿಮಾ ಆಗಿರೋ ಜೇಮ್ಸ್‍ನಲ್ಲಿ ಶಿವಣ್ಣ ಮತ್ತು ರಾಘವೇಂದ್ರ ರಾಜ್‍ಕುಮಾರ್ ಕೂಡಾ ನಟಿಸಿದ್ದಾರೆ.