` 100%ಗೆ ಡಿಮ್ಯಾಂಡ್ : ಚಿತ್ರರಂಗದ ನಿಯೋಗಕ್ಕೆ ಸಿಕ್ಕ ಭರವಸೆಯೇನು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
100%ಗೆ ಡಿಮ್ಯಾಂಡ್ : ಚಿತ್ರರಂಗದ ನಿಯೋಗಕ್ಕೆ ಸಿಕ್ಕ ಭರವಸೆಯೇನು?
100%ಗೆ ಡಿಮ್ಯಾಂಡ್ : ಚಿತ್ರರಂಗದ ನಿಯೋಗಕ್ಕೆ ಸಿಕ್ಕ ಭರವಸೆಯೇನು?

ಯಾವಾಗ 100% ಪ್ರೇಕ್ಷಕರ ಭರ್ತಿಗೆ ಅವಕಾಶ ಸಿಗುವುದೋ ಕಾಯುತ್ತಿರುವ ಚಿತ್ರರಂಗ ಮತ್ತು ಚಿತ್ರಮಂದಿರ ಮಾಲೀಕರ ಮನವಿಗೆ ಇನ್ನೂ ಪುರಸ್ಕಾರ ಸಿಕ್ಕಿಲ್ಲ. ಎಲ್ಲವನ್ನೂ ಓಪನ್ ಮಾಡಿರುವ ಸರ್ಕಾರ, ಚಿತ್ರಮಂದಿರಗಳನ್ನು ಮಾತ್ರ 50:50ಯಲ್ಲೇ ಇಟ್ಟಿದೆ. ಹಲವು ಬಾರಿ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದೆ. ಸೋಮವಾರ ಮತ್ತೊಮ್ಮೆ ಚಿತ್ರರಂಗದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ 100% ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ.

ಫಿಲಮ್ ಚೇಂಬರ್ ಅಧ್ಯಕ್ಷ ಜೈರಾಜ್, ನಿರ್ಮಾಪಕ ಸಾ.ರಾ.ಗೋವಿಂದು, ಕಾರ್ಯದರ್ಶಿ ಎನ್.ಎಂ.ಸುರೇಶ್ ಸೇರಿದಂತೆ ವಾಣಿಜ್ಯ ಮಂಡಳಿಯ ನಿಯೋಗ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿತು. ಬಿಡುಗಡೆಗೆ ಕಾದಿರುವ ಚಿತ್ರಗಳು, ಸಿನಿಮಾ ರಿಲೀಸ್ ಲೇಟ್ ಆದರೆ, ಸಂಪೂರ್ಣ ಅವಕಾಶ ಸಿಗದೇ ಇದ್ದರೆ ಎದುರಾಗುವ ಸಮಸ್ಯೆಗಳು, ಆಗುವ ನಷ್ಟ, ಕೊವಿಡ್ ಮಾರ್ಗಸೂಚಿ ಪಾಲನೆಯ ಭರವಸೆ.. ಎಲ್ಲವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.

ನಿಯೋಗದಲ್ಲಿ ಹೋಗಿ ಬಂದವರ ಪ್ರಕಾರ ಚಿತ್ರಮಂದಿರಗಳಿಗೆ 100% ಅವಕಾಶ ಈ ವಾರ ಅರ್ಥಾತ್ ಈ ಶುಕ್ರವಾರದಿಂದ ಸಿಗಬಹುದು. ಅಕಸ್ಮಾತ್.. ಈ ವಾರ ಸಿಗದೇ ಹೋದರೆ ಫೆಬ್ರವರಿ 2ನೇ ವಾರದಿಂದ 1995 ಪ್ರೇಕ್ಷಕರ ಭರ್ತಿಘೆ ಅವಕಾಶ ಸಿಗುವುದು ಶತಃಸಿದ್ಧ. ಚಿತ್ರಗಳ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳುವವರು ಮಾಡಿಕೊಳ್ಳಬಹುದು.