` ಫೆಬ್ರವರಿ 25ಕ್ಕೆ ಹಳೆ ಸನ್ಯಾಸಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಫೆಬ್ರವರಿ 25ಕ್ಕೆ ಹಳೆ ಸನ್ಯಾಸಿ..!
Old Monk Movie Image

ಓಲ್ಡ್ ಮಾಂಕ್. ಹಲವು ಕುಡುಕರ ಹಾರ್ಟ್ ಫೇವರಿಟ್. ಕುಡುಕರು ಇದನ್ನ ಪ್ರೀತಿಯಿಂದ ಹಳೆ ಸನ್ಯಾಸಿ ಅಂತಾನೇ ಕರೆದು ಖುಷಿ ಪಡ್ತಾರೆ. ಅದನ್ನೇ ತಮ್ಮ ಚಿತ್ರದ ಟೈಟಲ್ ಮಾಡಿಕೊಂಡ ಶ್ರೀನಿ ಈಗ ಸಿನಿಮಾ ರಿಲೀಸ್ ಮಾಡೋಕೆ ಶುಭ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಎಂ.ಜಿ.ಶ್ರೀನಿವಾಸ್ ತಾವೇ ಹೀರೋ ಆಗಿ, ಡೈರೆಕ್ಷನ್ ಮಾಡಿರೋ ಸಿನಿಮಾ ಓಲ್ಡ್ ಮಾಂಕ್. ಕೊರೊನಾ, ವಿಕ್ರಾಂತ್ ರೋಣ, ಆರ್‍ಆರ್‍ಆರ್.. ಎಲ್ಲವನ್ನೂ ಮೈಂಡ್‍ನಲ್ಲಿಟ್ಟುಕೊಂಡು ನಾಲ್ಕು ಡೇಟ್ ಕೊಟ್ಟಿದ್ದ ಶ್ರೀನಿ, ಫೆಬ್ರವರಿ 25ನ್ನು ಫೈನಲ್ ಮಾಡಿದ್ದಾರೆ.

ಶ್ರೀನಿಗೆ ಇಲ್ಲಿ ಅದಿತಿ ಪ್ರಭುದೇವ ಹೀರೋಯಿನ್. ಎಸ್.ನಾರಾಯಣ್, ಕಲಾತಪಸ್ವಿ ರಾಜೇಶ್, ಸುನಿಲ್ ರಾವ್, ಸುಜಯ್ ಶಾಸ್ತ್ರಿ, ಸಿಹಿಕಹಿ ಚಂದ್ರು ಸೇರಿದಂತೆ ದೊಡ್ಡ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ.