` ಚಿತ್ರರಂಗ ವೇಯ್ಟಿಂಗ್ : ಸಿಗುತ್ತಾ ಸರ್ಕಾರಿ ಗುಡ್ ನ್ಯೂಸ್? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಎಲ್ರ ಕಾಲೆಳೆಯುತ್ತೆ ಕಾಲ
ಎಲ್ರ ಕಾಲೆಳೆಯುತ್ತೆ ಕಾಲ

ಒತ್ತಡ ಹಾಕಿ, ಬೆದರಿಕೆ ಹಾಕಿದ್ದ ಮದ್ಯದಂಗಡಿ, ಬಾರ್, ಹೋಟೆಲ್, ರೆಸ್ಟೋರೆಂಟ್.. ಎಲ್ಲರಿಗೂ ಫುಲ್ ಓಪನ್ ಅವಕಾಶ ಕೊಟ್ಟ ಸರ್ಕಾರ ಚಿತ್ರಮಂದಿರ, ಜಿಮ್, ಮದುವೆ ಛತ್ರಗಳನ್ನು ಮಾತ್ರ ಹಾಗೆಯೇ ಮುಚ್ಚಿಟ್ಟುಕೊಂಡಿದೆ. ಈ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗದಲ್ಲಿ ಹೋಗಿ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದಾರೆ. ಆದರೆ.. ಸರ್ಕಾರ ಇನ್ನೂ ಒಪ್ಪಿಲ್ಲ.

ವಾಣಿಜ್ಯ ಮಂಡಳಿ ಪ್ರಕಾರ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿಯವರು ಕೊಟ್ಟಿರುವ ವರದಿಯೇ ಸರಿ ಇಲ್ಲ. ಕೇವಲ ಸಿನಿಮಾ, ಚಿತ್ರಮಂದಿರಗಳಿಂದ ಮಾತ್ರವೇ ಕೊರೊನಾ ಹರಡುತ್ತೆ ಎಂಬ ರೀತಿಯಲ್ಲಿ ಸಲಹೆ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ ಉಪಾಧ್ಯಕ್ಷ ಉಮೇಶ್ ಬಣಕಾರ್.

50:50 ನೀತಿಯಿಂದ ಚಿತ್ರರಂಗಕ್ಕೆ ಯಾವೆಲ್ಲ ಅನಾನುಕೂಲಗಳಿವೆ ಪಟ್ಟಿ ಮಾಡಿಕೊಂಡು ಬನ್ನಿ ಎಂದಿದ್ದಾರಂತೆ ಬೊಮ್ಮಾಯಿ. ಆಯಿತು ಎಂದು ಫಿಲ್ಮ್ ಚೇಂಬರ್ ನಿಯೋಗವೂ ಬಂದಿದೆ. ಆ ಲಿಸ್ಟ್ ಕೊಟ್ಟ ಮೇಲೆ ಏನು ಮಾಡಬೇಕು ಅನ್ನೋದನ್ನ ಸರ್ಕಾರ ನಿರ್ಧಾರ ಮಾಡಲಿದೆಯಂತೆ.

ಬೊಮ್ಮಾಯಿಯವರ ಜೊತೆ ನಾನೂ ಮಾತನಾಡುತ್ತೇನೆ. ಚಿತ್ರರಂಗದ ಕಷ್ಟಗಳಿಗೆ ಹಲವು ಬಾರಿ ಸ್ಪಂದಿಸಿದ್ದಾರೆ. ಈ ಬಾರಿಯೂ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿದೆ ಎಂಬ ನಿರೀಕ್ಷೆ ಇದೆ ಎಂದಿರೋದು ಶಿವ ರಾಜ್ ಕುಮಾರ್.