ಸೋಮವಾರದಿಂದ ಕರ್ನಾಟಕ ಬಹುತೇಕ ಅನ್ಲಾಕ್ ಆಗುತ್ತಿದೆ. ನೈಟ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ. ಪಬ್, ಬಾರ್ & ರೆಸ್ಟೋರೆಂಟ್, ಹೊಟೇಲ್ಗಳಲ್ಲಿ 100 % ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಥಿಯೇಟರುಗಳ ಮೇಲಿದ್ದ 50:50 ಕಂಡೀಷನ್ ಮುಂದುವರೆಯುತ್ತಿದೆ.
ರಿಲೀಸ್ಗೆ ರೆಡಿಯಾಗಿದ್ದ ಬಿಗ್ ಬಜೆಟ್ ಚಿತ್ರಗಳಿಗೆ ಇದು ಶಾಕ್ ನೀಡಿರುವುದಂತೂ ಸತ್ಯ. ಫಿಲಂ ಚೇಂಬರ್ ಮತ್ತು ಕರ್ನಾಟಕ ಪ್ರದರ್ಶಕರ ಮಂಡಳಿ 100 % ಪ್ರೇಕ್ಷಕರಿಗೆ ಮನವಿ ಮಾಡಿದ್ದವು. ಆದರೆ, ಸರ್ಕಾರ ಈ ಮನವಿಯನ್ನು ಪುರಸ್ಕರಿಸಿಲ್ಲ.
ಜಿಮ್, ಒಳಾಂಗಣ ಕ್ರೀಡಾಂಗನ ಹಾಗೂ ಈಜುಕೊಳಗಳಲ್ಲಿಯೂ 50% ರೂಲ್ಸ್ ಮುಂದುವರೆದಿದೆ. ಬೆಂಗಳೂರಿನಲ್ಲಿ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ದೇಗುಲಗಳಲ್ಲಿಯೂ ಸಂಪೂರ್ಣ ಸೇವೆಗೆ ಅವಕಾಶ ನೀಡಲಾಗಿದೆ. ಆದರೆ ಒಮ್ಮೆಗೆ 50 ಜನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರ ಥಿಯೇಟರುಗಳ ಮೇಲಿನ ನಿರ್ಬಂಧ ಮುಂದುವರೆಸಿರೋ ಹಿನ್ನೆಲೆಯಲ್ಲಿ ಫಿಲಂ ಚೇಂಬರ್ ನಿಯೋಗ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಲು ತೆರಳಿದೆ.