ಭಾರತದ ಮೊದಲ ಅಡ್ವೆಂಚರ್ ಹೀರೋ ಸಿನಿಮಾ ವಿಕ್ರಾಂತ್ ರೋಣ. ಅದನ್ನು ನಿರ್ಮಾಪಕ ಜಾಕ್ ಮಂಜು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಎಲ್ಲವೂ ಅವರ ಪ್ಲಾನ್ ಪ್ರಕಾರವೇ ಜರುಗಿದ್ದರೆ ಫೆ.24ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಅದನ್ನು ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿಯಾಗಿತ್ತು. ಆದರೆ ಈಗ ಜಾಕ್ ಮಂಜು ಅವರೇ ಅಧಿಕೃತವಾಗಿ ಫೆ.24ಕ್ಕೆ ರಿಲೀಸ್ ಇಲ್ಲ ಎಂದಿದ್ದಾರೆ.
ಸುದೀಪ್ ಅವರ ಸಿನಿಮಾವನ್ನು ಈಗಾಗಲೇ ಅಭಿಮಾನಿಗಳೇ ಪ್ರಚಾರ ಮಾಡುತ್ತಿದ್ದಾರೆ. ಸದ್ಯಕ್ಕಿನ್ನೂ ಸರ್ಕಾರ ಥಿಯೇಟರುಗಳಲ್ಲಿ 50:50 ರೂಲ್ಸ್ ತೆಗೆದಿಲ್ಲ. ಯಾವಾಗ 100% ಪ್ರೇಕ್ಷಕರಿಗೆ ಅವಕಾಶ ಕೊಡುತ್ತಾರೋ.. ಅದೂ ಗೊತ್ತಿಲ್ಲ. ಈ ಗೊಂದಲದಲ್ಲಿ ಸಿನಿಮಾ ರಿಲೀಸ್ ಮಾಡೋದು ಬೇಡ ಎನ್ನುವುದು ಜಾಕ್ ಮಂಜು ವಾದ. ಸಿನಿಮಾವನ್ನ 3ಡಿಯಲ್ಲಿಯೂ ರೂಪಿಸಲಾಗಿದೆ. ಹೀಗಾಗಿಯೇ 100 ಕೋಟಿ ಆಫರ್ ಬಂದರೂ ಸಿನಿಮಾವನ್ನು ಒಟಿಟಿಗೆ ಕೊಟ್ಟಿಲ್ಲ.
ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದಲ್ಲಿ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಜಾಕ್ ಮಂಜು ನಿರ್ಮಾಪಕರಾಗಿದ್ದು, ಅಲಂಕಾರ್ ಪಾಂಡ್ಯನ್ ಸಹ ನಿರ್ಮಾಪಕರಾಗಿದ್ದಾರೆ.