ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ. ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರವನ್ನು ಡೈರೆಕ್ಟ್ ಮಾಡಿದ್ದ ಕುಶಾಲ್ ಗೌಡ ನಿರ್ದೇಶನದ ಸಿನಿಮಾ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಭಾವನಾ ಮೊದಲಾದವರು ನಟಿಸಿರೋ ಚಿತ್ರದ ಚಿತ್ರೀಕರಣ ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ನಡೆಯುತ್ತಿದೆ.
ಆಕ್ಚುಯಲಿ ಜಮಾಲಿಗುಡ್ಡ ಅನ್ನೋ ಸ್ಥಳ ಇಲ್ಲ. ಅದು ನಮ್ಮ ಕಲ್ಪನೆಯ ಜಾಗ. ಲವ್, ಆ್ಯಕ್ಷನ್ ಎಲ್ಲವೂ ಇರೋ ಎಂಟರ್‍ಟೈನರ್. ಜಮಾಲಿಗುಡ್ಡ ಅನ್ನೋ ಸ್ಥಳದಲ್ಲಿ ಒಂದು ಕಾಲದಲ್ಲಿ ಏನೆಲ್ಲ ನಡೀತು ಅನ್ನೋದೆ ನಮ್ಮ ಕಥೆ. ಹೀಗಾಗಿ ಜಾನರ್ ಹೇಳಲ್ಲ ಎನ್ನುತ್ತಾರೆ ಕುಶಾಲ್ ಗೌಡ.
ಶ್ರೀಹರಿ ರೆಡ್ಡಿ ನಿರ್ಮಾಣದ ಸಿನಿಮಾ ಈಗಾಗಲೇ 45 ದಿನದ ಶೂಟಿಂಗ್ ಮುಗಿಸಿದೆ. ಮೇಕಿಂಗ್ ಅದ್ಧೂರಿಯಾಗಿಯೇ ಇದೆ. ಸತತವಾಗಿ ಸಕ್ಸಸ್ ಕಾಣುತ್ತಿರೋ ಡಾಲಿ ಧನಂಜಯ್ ಸಿನಿಮಾ, ಇನ್ನೊಂದೆರಡು ತಿಂಗಳಲ್ಲಿ ರಿಲೀಸ್‍ಗೆ ರೆಡಿಯಾಗುವ ನಿರೀಕ್ಷೆ ಇದೆ.