ಇಡೀ ಚಿತ್ರದಲ್ಲಿ ತಮ್ಮ ಈ ಹಿಂದಿನ ಪಾತ್ರಗಳಿಗಿಂತ ಡಿಫರೆಂಟ್ ಆಗಿ ಕಾಣಿಸಿಕೊಂಡಿರೋದು ಯೋಗಿ ಮತ್ತು ಸಾಯಿಕುಮಾರ್. ಕ್ರೈಂ ಸ್ಟೋರಿ ಅಂದ್ರೆ ಕತ್ತಲು ಮತ್ತು ಬ್ಲಡ್ ಶೇಡ್ ಇರುತ್ತೆ. ಆದರೆ ಇಲ್ಲಿ ಕತ್ತಲಿಲ್ಲ, ಬ್ಲಡ್ ಇಲ್ಲ. ಹಗಲಲ್ಲೇ ನಡೆಯೋ ಕ್ರೈಂ ಸ್ಟೋರಿ. ಮನರಂಜನೆ ಜೊತೆಗೆ ಕಾಡುವ ಗುಣ ಈ ಚಿತ್ರಕ್ಕಿದೆ...
ತಮ್ಮ ನಿರ್ದೇಶನದ ಒಂಬತ್ತನೇ ದಿಕ್ಕಿನ ಬಗ್ಗೆ ಪ್ರೀತಿ ಮತ್ತು ಆತ್ಮವಿಶ್ವಾಸದಿಂದ ಹೇಳುತ್ತಾ ಹೋಗುತ್ತಾರೆ ದಯಾಳ್ ಪದ್ಮನಾಭನ್. 20 ವರ್ಷಗಳ ಕೆರಿಯರ್‍ನಲ್ಲಿ ದಯಾಳ್ ಅವರಿಗೆ ಇದು 9ನೇ ಸಿನಿಮಾ. ಆ್ಯಕ್ಟರ್ ಚಿತ್ರದ ನಂತರ ತಮ್ಮ ಜಾನರ್‍ನ್ನೇ ಬದಲಿಸಿಕೊಂಡು ಗೆದ್ದ ಡೈರೆಕ್ಟರ್ ದಯಾಳ್.
ಇಡೀ ಚಿತ್ರದಲ್ಲಿ ಕುತೂಹಲ ಹುಟ್ಟಿಸೋದು ಕೈಯಿಂದ ಕೈಗೆ ಬದಲಾಗುತ್ತಾ ಹೋಗುವ ಬ್ಯಾಗ್. ಆ ಬ್ಯಾಗ್‍ನಲ್ಲೇನಿದೆ ಅನ್ನೋದನ್ನ ನೀವು ಊಹಿಸಬಹುದು. ಆದರೆ ಆ ಊಹೆ ಸುಳ್ಳಾಗುತ್ತೆ. ಮತ್ತೆ ಮತ್ತೆ ಸುಳ್ಳಾಗುತ್ತೆ. ಆ ಕುತೂಹಲ, ಪ್ರೇಕ್ಷಕ ಹುಡುಕುವ ಉತ್ತರ, ಆತನ ಉತ್ತರ ಸುಳ್ಳಾಗುವುದು, ಬಯಲಿನಲ್ಲಿ ಕಾಣಿಸುವ ಮತ್ತು ಕಾಣದ ರಹಸ್ಯಗಳ ಕಥೆಯೇ ಒಂಬತ್ತನೇ ದಿಕ್ಕು ಎನ್ನುತ್ತಾರೆ ದಯಾಳ್. ಬಹಳ ವರ್ಷಗಳ ನಂತರ ರಮೇಶ್ ಭಟ್ ಅವರಿಗೆ ಸವಾಲು ಎನಿಸುವ ಪಾತ್ರ ಸಿಕ್ಕಿದೆ. ಯೋಗಿ, ಸಾಯಿಕುಮಾರ್, ಅದಿತಿ ಪ್ರಭುದೇವ ಪ್ರಧಾನ ಪಾತ್ರದಲ್ಲಿರೋ ಚಿತ್ರ ಈಗ ಥಿಯೇಟರುಗಳಲ್ಲಿದೆ.