ಬಡವ ರಾಸ್ಕಲ್, 2021ರ ಸೂಪರ್ ಹಿಟ್ ಸಿನಿಮಾ. ಬಡವ ರಾಸ್ಕಲ್ ಸಿನಿಮಾ ರಿಲೀಸ್ ಆಗುವ ಒಂದು ವಾರ ಮುನ್ನ ಪುಷ್ಪ ರಿಲೀಸ್ ಆಗಿತ್ತು. ತೆಲುಗಿನಲ್ಲಷ್ಟೇ ಅಲ್ಲ, ಎಲ್ಲ ಭಾಷೆಗಳಲ್ಲೂ ಹಿಟ್ ಆದ ಸಿನಿಮಾ ಪುಷ್ಪ. ಆ ಚಿತ್ರದಲ್ಲಿ ಜಾಲಿ ರೆಡ್ಡಿಯಾಗಿ ಬೆಂಕಿ ಹಚ್ಚಿದ್ದವರು ನಮ್ಮ ಡಾಲಿ ಧನಂಜಯ್. ಅತ್ತ ಪುಷ್ಪ ಹಿಟ್ ಆಗುತ್ತಿದ್ದಂತೆಯೇ ಕನ್ನಡದಲ್ಲೂ ಹಿಟ್ ಆಗಿರುವ ಬಡವ ರಾಸ್ಕಲ್‍ಗೆ ಫುಲ್ ಡಿಮ್ಯಾಂಡ್ ಬಂದಿದೆ.
ಒಳ್ಳೆಯ ರೇಟ್‍ಗೆ ಬಡವ ರಾಸ್ಕಲ್‍ನ ತೆಲುಗು ಡಬ್ಬಿಂಗ್ ರೈಟ್ಸ್ ಸೇಲ್ ಆಗಿವೆ
ಎನ್ನಲಾಗಿದೆ. ಅಮೌಂಟ್ ಎಷ್ಟು ಅನ್ನೋದು ಅಧಿಕೃತವಾಗಿ ಗೊತ್ತಾಗಿಲ್ಲ. ಡಬ್ಬಿಂಗ್ ಕೂಡಾ ಶುರುವಾಗಿದೆ. ತಮಿಳಿನಲ್ಲಿ ಬಡವ ರಾಸ್ಕಲ್ ಡೈರೆಕ್ಟ್ ಓಟಿಟಿಗೇ ಬರುತ್ತಿದೆ. ಅಲ್ಲಿಯೂ ಡಬ್ಬಿಂಗ್ ಕೆಲಸ ನಡೆಯುತ್ತಿದೆ.
ಶಂಕರ್ ಗುರು ನಿರ್ದೇಸನದ ಬಡವ ರಾಸ್ಕಲ್, ಧನಂಜಯ್, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣಚಂದ್ರ ನಟಿಸಿರೋ ಸಿನಿಮಾ. ಧನಂಜಯ್ ಕೂಡಾ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ.