ಕನ್ನಡದಲ್ಲಿ ಧ್ರುವ ಸರ್ಜಾ, ರಿಷಬ್ ಶೆಟ್ಟಿ ಮತ್ತು ನೀನಾಸಂ ಸತೀಶ್. ತೆಲುಗಿನಲ್ಲಿ ರಾಜಶೇಖರ್ ಮತ್ತು ಸುಧೀರ್ ಬಾಬು. ತಮಿಳಿನಲ್ಲಿ ಸತ್ಯರಾಜ್, ಪಾರ್ಥಿಬನ್, ವೆಂಕಟ್ ಪ್ರಭು ಮತ್ತು ಸಿಶೀಂದ್ರನ್.
ಹೀಗೆ ಪ್ರತಿ ಭಾಷೆಯಲ್ಲೂ ಆ ಚಿತ್ರರಂಗದ ಖ್ಯಾತನಾಮರು ರಿಲೀಸ್ ಮಾಡುವ ಮೂಲಕ ಮಾಫಿಯಾ ಟೀಸರ್ ಹಬ್ಬ ಮಾಡಿದೆ ಮಾಫಿಯಾ ಟೀಂ.
ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್, ಒರಟ ಪ್ರಶಾಂತ್ ಪ್ರಧಾನ ಪಾತ್ರದಲ್ಲಿರೋ ಚಿತ್ರ ಮಾಫಿಯಾ. ಬೆಂಗಳೂರು ಕುಮಾರ್ ನಿರ್ಮಾಣದ ಲೋಹಿತ್ ನಿರ್ದೇಶನದ ಮಾಫಿಯಾ ಟೀಸರ್ ವ್ಹಾವ್ ಎನ್ನುವಂತಿದೆ.
ಅಂದಹಾಗೆ ಈ ಚಿತ್ರದಲ್ಲಿ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಇಬ್ಬರೂ ಪೊಲೀಸ್ ಆಫೀಸರ್ಸ್. ಅದಿತಿ ಜರ್ನಲಿಸ್ಟ್. ಒರಟ ಪ್ರಶಾಂತ್ ಅವರದ್ದು ಸ್ಪೆಷಲ್ ಪಾತ್ರ. ಅಂದಹಾಗೆ ಮಾಫಿಯಾ ಆಡಿಯೋ ರೈಟ್ಸ್‍ನ್ನು ಆನಂದ್ ಆಡಿಯೋ 30 ಲಕ್ಷಕ್ಕೆ ಖರೀದಿಸಿದೆ ಅನ್ನೋದು ಮಾಫಿಯಾ ಟೀಂಗೆ ಗುಡ್ ನ್ಯೂಸ್.