` 11 ಥಿಯೇಟರುಗಳಲ್ಲಿ 50 ದಿನ ಪೂರೈಸಿದ ಮದಗಜ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
11 ಥಿಯೇಟರುಗಳಲ್ಲಿ 50 ದಿನ ಪೂರೈಸಿದ ಮದಗಜ
Madagaja Movie Image

ಶ್ರೀಮುರಳಿ ಅಭಿನಯದ ಮದಗಜ ಹಿಟ್ ಚಿತ್ರಗಳ ಸಾಲಿಗೆ ಸೇರಿದೆ. 2021ರ ಡಿಸೆಂಬರ್ 3ರಂದು ರಿಲೀಸ್ ಆಗಿದ್ದ ಮದಗಜ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಈ ನಡುವೆ ರಿಲೀಸ್‍ಗೂ ಮೊದಲೇ ಆಗಿದ್ದ ನಿರ್ಧಾರದಂತೆ ಚಿತ್ರ ಒಟಿಟಿಗೂ ಬಂದಿತ್ತು. ಹೀಗಿದ್ದರೂ ಥಿಯೇಟರುಗಳಲ್ಲಿ ಉತ್ತಮ ಪ್ರದರ್ಶನ ಕಂಡ ಮದಗಜ ಜನವರಿ 27ಕ್ಕೆ 50 ದಿನ ಪೂರೈಸುತ್ತಿದೆ. 11 ಸೆಂಟರುಗಳಲ್ಲಿ.

ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಅಯೋಗ್ಯ ಮಹೇಶ್ ಕುಮಾರ್ ನಿರ್ದೇಶನದ ಚಿತ್ರ ಮದಗಜ. ಶ್ರೀಮುರಳಿ ಎದುರು ಅಶಿಕಾ ರಂಗನಾಥ್ ನಾಯಕಿಯಾಗಿದ್ದರು. ಜಗಪತಿ ಬಾಬು ವಿಶಿಷ್ಟ ಪಾತ್ರದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದರು. ಚಿತ್ರ ಹಿಟ್ ಆಗಿರುವ ಹಿನ್ನೆಲೆಯಲ್ಲಿ ಮೂರೂ ಜನ ಒಟ್ಟಿಗೇ ಸೇರಿ ಪಾರ್ಟಿ ಮಾಡಿದ್ದಾರೆ.

ಮದಗಜ ಟೀಂನ್ನೇ ಇಟ್ಟುಕೊಂಡು ಇನ್ನೊಂದು ಸಿನಿಮಾ ಮಾಡುವ ಪ್ಲಾನ್ ಇದೆ. ಸದ್ಯಕ್ಕೆ ನಾನು ಒಂದು ಮಲ್ಟಿಸ್ಟಾರ್ ಚಿತ್ರದಲ್ಲಿ ಬ್ಯುಸಿ ಇದ್ದೇನೆ. ಶ್ರೀಮುರಳಿ ಬಘೀರ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಉಮಾಪತಿ ಶ್ರೀನಿವಾಸ ಗೌಡ ಉಪಾಧ್ಯಕ್ಷ ಚಿತ್ರ ಶುರು ಮಾಡಿದ್ದಾರೆ. ಮೂವರ ಕಮಿಟ್‍ಮೆಂಟ್ ಮುಗಿದ ಮೇಲೆ ಹೊಸ ಸಿನಿಮಾ ಮಾಡುತ್ತೇವೆ ಎಂದಿದ್ದಾರೆ ಮಹೇಶ್ ಕುಮಾರ್.