` ಶಿವಣ್ಣ-ಯೋಗರಾಜ್ ಭಟ್-ಪ್ರಭುದೇವ ಕಾಂಬಿನೇಷನ್`ನಲ್ಲಿ ಸಿನಿಮಾ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಶಿವಣ್ಣ-ಯೋಗರಾಜ್ ಭಟ್-ಪ್ರಭುದೇವ ಕಾಂಬಿನೇಷನ್`ನಲ್ಲಿ ಸಿನಿಮಾ..!
Shivarajkumar, Prabhudeva, Yogaraj Bhat

ಶಿವರಾಜ್ ಕುಮಾರ್ ಜೊತೆ ಸಿನಿಮಾ ಮಾಡಬೇಕು ಅನ್ನೋದು ಯೋಗರಾಜ್ ಭಟ್ ಅವರ ಕನಸು.  ಆ ಕನಸು ಈಗ ನನಸಾಗುತ್ತಿದೆ. ಶಿವಣ್ಣ ಜೊತೆ ಹೊಸ ಚಿತ್ರಕ್ಕೆ ಭಟ್ಟರು ರೆಡಿಯಾಗಿದ್ದಾರೆ. ಶಿವಣ್ಣ ಕೂಡಾ ಓಕೆ ಎಂದಿದ್ದಾರಂತೆ. ವಿಶೇಷವೆಂದರೆ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಕೂಡಾ ಆ ಚಿತ್ರದಲ್ಲಿ ನಟಿಸೋಕೆ ಓಕೆ ಎಂದಿರೋದು.

ಶಿವಣ್ಣ ಮತ್ತು ಪ್ರಭುದೇವ ಇಬ್ಬರೂ ಇರುತ್ತಾರೆ ಎಂದರೆ ಅದು ಡ್ಯಾನ್ಸ್ ಕಾನ್ಸೆಪ್ಟ್ ಸಿನಿಮಾನೇ ಇರಬೇಕು ಎನ್ನುವುದು ನಿರೀಕ್ಷೆ. ಸದ್ಯಕ್ಕೆ ಇದು ನಿರೀಕ್ಷೆ ಮಾತ್ರ. ಅಧಿಕೃತ ಅಲ್ಲ.

ಭಟ್ಟರು ಗಾಳಿಪಟ 2 ಪೋಸ್ಟ್ ಪ್ರೊಡಕ್ಷನ್ ಮತ್ತು ಗರಡಿ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ. ಅತ್ತ ಶಿವಣ್ಣ ವೇದ, ಬೈರಾಗಿ, ನೀ ಸಿಗೋವರೆಗೂ ಚಿತ್ರಗಳಲ್ಲಿ ಬ್ಯುಸಿ. ಅವರ ಲಿಸ್ಟು ಸಿಕ್ಕಾಪಟ್ಟೆ ದೊಡ್ಡದು.

ಬಹುಶಃ ತ್ರಿಮೂರ್ತಿಗಳ ಕಾಂಬಿನೇಷನ್ ಸಿನಿಮಾ ಮೇ ಹೊತ್ತಿಗೆ ಸೆಟ್ಟೇರಬಹುದು.