` ಅಪ್ಪು ಇಲ್ಲದ ಜೇಮ್ಸ್‍ನಲ್ಲಿ ಅಣ್ಣಾವ್ರ ಮಕ್ಕಳ ಸಮಾಗಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಪ್ಪು ಇಲ್ಲದ ಜೇಮ್ಸ್‍ನಲ್ಲಿ ಅಣ್ಣಾವ್ರ ಮಕ್ಕಳ ಸಮಾಗಮ
James Movie Image

ಶಿವಣ್ಣ, ರಾಘವೇಂದ್ರ ಮತ್ತು ಪುನೀತ್ ರಾಜ್‍ಕುಮಾರ್ ಒಟ್ಟಿಗೇ ನಟಿಸಬೇಕು, ಒಂದೇ ಚಿತ್ರದಲ್ಲಿ ನಟಿಸಬೇಕು ಅನ್ನೋ ಕನಸು ಅಭಿಮಾನಿಗಳದ್ದಾಗಿತ್ತು. ಆದರೆ ಮೂವರನ್ನೂ ಒಂದೇ ಚಿತ್ರದಲ್ಲಿ ಕಾಣುವ ಭಾಗ್ಯ ಸಿಗಲೇ ಇಲ್ಲ. ಕನಸು ನನಸಾಗಲಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಕ್ಕಿದ್ದು ಅಪ್ಪು ಅಕಾಲಿಕ ಮರಣದ ಆಘಾತ. ಅಪ್ಪು ದೂರವಾದ ಮೇಲೆ ಈಗ ಅದು ಕೈಗೂಡಿ ಬರುತ್ತಿದೆ. ಜೇಮ್ಸ್ ಚಿತ್ರದಲ್ಲಿ ಅಣ್ಣಾವ್ರ ಮಕ್ಕಳ ಸಮಾಗಮವಾಗಿದೆ.

ಚೇತನ್ ಅಂಥಾದ್ದೊಂದು ಅವಕಾಶ ನೀಡಿದಾಗ ಬೇಡ ಎನ್ನೋಕೆ ಆಗಲಿಲ್ಲ. ಇದನ್ನು ಮಿಸ್ ಮಾಡಿಕೊಳ್ಳಲೇಬಾರದು ಎನಿಸಿತು. ಹೀಗಾಗಿ ರಾಘು ಜೊತೆ ನಟಿಸಿದ್ದೇನೆ ಎಂದಿದ್ದಾರೆ ಶಿವಣ್ಣ. ಅದೊಂದು ನೋವಿನ ಕ್ಷಣ. ಅಪ್ಪು ಇರಬೇಕಿತ್ತು ಎಂದಿದ್ದಾರೆ ರಾಘವೇಂದ್ರ ರಾಜ್‍ಕುಮಾರ್. ಶುಕ್ರವಾರ ಚಿತ್ರೀಕರಣವೂ ಮುಗಿದಿದೆ.

ಪುನೀತ್ ಅವರ ಪೋರ್ಷನ್ಸ್ ಚಿತ್ರೀಕರಣ ಮೊದಲೇ ಮುಗಿದಿತ್ತು. ಉಳಿದ ಭಾಗದ ಚಿತ್ರೀಕರಣ ಇತ್ತು. ಆಗ ಶಿವಣ್ಣ ಮತ್ತು ರಾಘಣ್ಣರನ್ನು ನಟಿಸುವಂತೆ ಮಾಡಿದರೆ ಹೇಗೆ ಅನ್ನೋ ಆಲೋಚನೆ ಬಂತು. ಕೇಳಿದೆ, ಅವರೂ ಓಕೆ ಎಂದರು. ಉಳಿದ ವಿವರವನ್ನು ಶೀಘ್ರದಲ್ಲೇ ನೀಡುತ್ತೇನೆ. ಅಪ್ಪು ಜೊತೆ ಅವರಿಬ್ಬರೂ ನಟಿಸುವ ದೃಶ್ಯವಿಲ್ಲದಿದ್ದರೂ, ಒಂದೇ ಚಿತ್ರದಲ್ಲಿ ಮೂವರೂ ಇರುವಂತೆ ಮಾಡಿದ್ದೇವೆ ಎಂದಿದ್ದಾರೆ ಚೇತನ್ ಕುಮಾರ್.

ಇದು ಗಿಮಿಕ್ ಅಲ್ಲ. ಅಪ್ಪು ಚಿತ್ರದಲ್ಲಿ ನಾನು ಮತ್ತು ಶಿವಣ್ಣ ಒಂದು ಸಣ್ಣ ಪಾತ್ರ ಮಾಡಿದ್ದೀವಿ ಅಷ್ಟೆ. ಮೂವರೂ ಒಟ್ಟಿಗೇ ತೆರೆ ಮೇಲೆ ಬರಲ್ಲ. ಆದರೆ ಒಂದೇ ಚಿತ್ರದಲ್ಲಿದ್ದೇವೆ ಎಂಬುದಷ್ಟೇ ವಿಷಯ ಎಂದಿದ್ದಾರೆ ರಾಘವೇಂದ್ರ ರಾಜ್‍ಕುಮಾರ್. ಚಿತ್ರೀಕರಣ ನಡೆಯುವ ವೇಳೆ ಇಡೀ ಜೇಮ್ಸ್ ಟೀಂ ಕಣ್ಣೀರಿಟ್ಟಿದೆ. ಗಣರಾಜ್ಯೋತ್ಸವದ ದಿನ ಚಿತ್ರದ ಸ್ಪೆಷಲ್ ಪೋಸ್ಟರ್ ಜನವರಿ 26ರಂದು ರಿಲೀಸ್ ಆಗಲಿದೆ. ಕಿಶೋರ್ ಪತಿಕೊಂಡ ನಿರ್ಮಾಣದ ಜೇಮ್ಸ್ ಚಿತ್ರವನ್ನು ಅಪ್ಪು ಹುಟ್ಟುಹಬ್ಬದಂದು ತೆರೆಗೆ ತರಲು ಚಿತ್ರತಂಡ ಶ್ರಮಿಸುತ್ತಿದೆ. ಆದರೆ ಪುನೀತ್ ಪಾತ್ರಕ್ಕೆ ಡಬ್ಬಿಂಗ್ ಮಾಡಿಸುವುದೇ ದೊಡ್ಡ ಸವಾಲಾಗಿದೆ.