ನಿಖಿಲ್ ಕುಮಾರಸ್ವಾಮಿ ಹೊಸ ಚಿತ್ರದ ಟೈಟಲ್ ಇದು. ಯದುವೀರ. ಕೆವಿಎನ್ ಪ್ರೊಡಕ್ಷನ್ಸ್ನವರ ಹೊಸ ಪಿಕ್ಚರ್. ಮಂಜು ಅಥರ್ವ ನಿರ್ದೇಶನದ ಚಿತ್ರದ ಶೂಟಿಂಗ್ ಕೂಡಾ ಶುರುವಾಗಿದೆ. ಟೈಟಲ್ನ್ನು ಹುಟ್ಟುಹಬ್ಬದ ದಿನ ರಿಲೀಸ್ ಮಾಡಿದ್ದಾರೆ. ಫ್ಯಾನ್ಸ್ ಖುಷ್ ಹುವಾ.
ಅಂದಹಾಗೆ ಯದುವೀರ ಚಿತ್ರಕ್ಕೂ ಮೈಸೂರು ಮಹಾರಾಜರಿಗೂ ಯಾವುದೇ ಸಂಬಂಧ ಇಲ್ಲ. ಚಿತ್ರದಲ್ಲಿ ನಿಖಿಲ್ ಅವರದ್ದು ಎರಡು ಶೇಡ್ ಪಾತ್ರ. ಮಂಡ್ಯದ ಹಳ್ಳಿಯ ರೈತನಾಗಿ ನಟಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಅಥರ್ವ. ಕುರುಕ್ಷೇತ್ರ ಬಿಟ್ಟರೆ, ಇದುವರೆಗೂ ನಿಖಿಲ್ ನಟಿಸಿರುವ ಚಿತ್ರಗಳಲ್ಲೆಲ್ಲ ಅವರ ಮಾಡಿರೋದು ನಗರ ಕೇಂದ್ರಿತ ಪಾತ್ರಗಳನ್ನೇ. ಹಾಗಾಗಿ ಇದು ಹೊಸದಾಗಿ ಕಾಣಿಸಬಹುದು.