ಜನವರಿ 28ಕ್ಕೆ ಯೋಗಿ ಅಭಿನಯದ ಒಂಬತ್ತನೇ ದಿಕ್ಕು ರಿಲೀಸ್ ಆಗುತ್ತಿದೆ. ದಯಾಳ್ ಪದ್ಮನಾಭನ್ ನಿರ್ದೇಶನದ ಒಂಬತ್ತನೇ ದಿಕ್ಕು ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿ. ಸ್ಪೆಷಲ್ ಸ್ಟೋರಿ ಇದೆ ಅನ್ನೋದ್ರಲ್ಲೇನೂ ಅನುಮಾನವಿಲ್ಲ. ಆದರೆ ಹೆಡ್ಲೈನ್ಗೂ ಇದಕ್ಕೂ ಏನು ಸಂಬಂಧ ಎನ್ನುತ್ತೀರಾ?
2ನೇ ಲಾಕ್ ಡೌನ್ ಮುಗಿದು ಥಿಯೇಟರುಗಳು ಓಪನ್ ಆದಾಗ ಮೊದಲಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದು ಲೂಸ್ ಮಾದ ಯೋಗಿಯ ಲಂಕೆ ಸಿನಿಮಾ. ನಂತರವೇ ಉಳಿದ ಚಿತ್ರಗಳ ಮೆರವಣಿಗೆ ಶುರುವಾಗಿದ್ದು.
ಈಗ 3ನೇ ಲಾಕ್ ಮುಗಿದು, ಓಪನ್ ಆದಾಗ ಮತ್ತೆ ಓಪನಿಂಗ್ ಮಾಡ್ತಿರೋದು ಸೇಮ್ ಯೋಗಿ. ಒಂಬತ್ತನೇ ದಿಕ್ಕಿನಲ್ಲಿ. ಅವಿನಾಶ್ ಯು.ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿರೋ ಚಿತ್ರಕ್ಕೆ ಗುರು ದೇಶಪಾಂಡೆ ಬಿಸಿನೆಸ್ ಅಸೋಸಿಯೇಟ್.