ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಉಮಾಪತಿ ಅವರ ಹತ್ಯೆ ಸಂಚಿನಲ್ಲಿ ಇನ್ನಿಬ್ಬರ ಬಂಧನವಾಗಿದೆ. 2020ರ ಡಿಸೆಂಬರ್ನಲ್ಲಿ ಉಮಾಪತಿ ಹತ್ಯೆಗೆ ಸ್ಕೆಚ್ ಹಾಕಿದ್ದು ಬಯಲಾಗಿತ್ತು. ಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುದರ್ಶನ್ 10ಕ್ಕೂ ಹೆಚ್ಚು ಮಂದಿಯನ್ನು ಅರೆಸ್ಟ್ ಮಾಡಿದ್ದರು.
ರಾತ್ರಿ ಗಸ್ತಿನಲ್ಲಿದ್ದ ಸುದರ್ಶನ್ ಮತ್ತವರ ತಂಡಕ್ಕೆ ಆಕಸ್ಮಿಕವಾಗಿ ಸಿಕ್ಕಿಬಿದ್ದ ಗ್ಯಾಂಗ್ ಅದು. ಈಗ ಇನ್ನಿಬ್ಬರ ಬಂಧನವಾಗಿದೆ. ಉಮಾಪತಿ ಹತ್ಯೆಗೆ ಬಾಂಬೆ ರವಿ ಸ್ಕೆಚ್ ಹಾಕಿದ್ದ.
ತಲೆಮರೆಸಿಕೊಂಡಿದ್ದ ದರ್ಶನ್ ಅಲಿಯಾಸ್ ರಾಬರಿ ಮತ್ತು ಸಂಜು ಎಂಬುವವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರಿಬ್ಬರ ಬಂಧನವೂ ಸೇರಿ ಇದುವರೆಗೆ 17 ಆರೋಪಿಗಳ ಬಂಧನವಾದಂತಾಗಿದೆ.