ಕೊರೊನಾ 3ನೇ ಅಲೆಯ ವೀಕೆಂಡ್ ಕರ್ಫ್ಯೂ ಮುಕ್ತಾಯ ಕಂಡಿದೆ. ನಾಳೆಯಿಂದಲೇ ವೀಕೆಂಡ್ ಕರ್ಫ್ಯೂ ಇರಲ್ಲ. ತಜ್ಞರ ಜೊತೆಗಿನ ಸಭೆ ಬಳಿಕ ರಾಜ್ಯ ಸರ್ಕಾರ ಈ ನಿರ್ಧಾರ ಘೋಷಿಸಿದೆ.
ಆದರೆ, ಥಿಯೇಟರುಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ ನೀಡಿದೆ. 100% ಇಲ್ಲ. ಆದರೆ ವೀಕೆಂಡ್ ಲಾಕ್ ತೆಗೆದಿರೋ ಹಿನ್ನೆಲೆಯಲ್ಲಿ ಸಿನಿಮಾಗಳ ರಿಲೀಸ್ ಶುರುವಾಗಲಿದೆ. ಒಂಬತ್ತನೇ ದಿಕ್ಕು, ವರದ ಸೇರಿದಂತೆ ಕೆಲವು ಚಿತ್ರಗಳು ರೇಸ್ನಲ್ಲಿವೆ. ವಿಕ್ರಾಂತ್ ರೋಣ, ತೋತಾಪುರಿ, ಏಕ್ ಲವ್ ಯಾ ಸೇರಿದಂತೆ ಕೆಲವು ದೊಡ್ಡ ನಟರ ಚಿತ್ರಗಳು 100% ಪ್ರೇಕ್ಷಕರ ಅನುಮತಿಗೆ ಕಾಯಬಹುದು.
ಇದರ ಜೊತೆಗೆ ಮಾಸ್ಕ್, ಕಡ್ಡಾಯ ವ್ಯಾಕ್ಸಿನ್, ಸ್ಯಾನಿಟೈಸರ್, ಸಾಮಾಜಿಕ ಅಂತರ ನಿಯಮಗಳು ಎಂದಿನಂತೆ ಇರಲಿವೆ.