ಅಪ್ಪು ಅಭಿಮಾನದ ಕಣ್ಣೀರು ಇನ್ನೂ ಆರಿಲ್ಲ. ಇಂದಿಗೂ ನೂರಾರು ಜನ ಪ್ರತಿನಿತ್ಯ ಅಪ್ಪು ಸಮಾಧಿಗೆ ಭೇಟಿ ನೀಡಿ ಕಣ್ಣೀರಿಡುತ್ತಿದ್ದಾರೆ. ಒಂದು ರೀತಿಯಲ್ಲಿ ಅಪ್ಪು ಸಮಾಧಿ ಪುಣ್ಯಕ್ಷೇತ್ರವಾಗುತ್ತಿದೆ. ಇದರ ನಡುವೆ ಇಂತಹ ಅಭಿಮಾನಿಗಳು. ಈತನ ಹೆಸರು ಗುರು ಪ್ರಕಾಶ್ ಗೌಡ.
ಇರೋದು ಹಿಮಾಲಯದಲ್ಲಿ. ಹಿಮಾಚಲ ಪ್ರದೇಶದಲ್ಲಿ. ಅಪ್ಪಟ ಕನ್ನಡಿಗ. ಒಟ್ಟು 47 ದಿನ ಸತತವಾಗಿ 3350 ಕಿ.ಮೀ. ದೂರವನ್ನು ಸೈಕ್ಲಿಂಗ್ ಮಾಡುತ್ತಲೇ ಬಂದಿರೋ ಗುರುಪ್ರಕಾಶ್ ಗೌಡ ಅಪ್ಪು ಸಮಾಧಿಯೆದರು ಭಾವುಕರಾಗಿ ನಿಂತಿದ್ದಾರೆ.
ಗುರು ಪ್ರಕಾಶ್ ಗೌಡ ಅವರು ಈ ರೀತಿ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸ್ವತಃ ಯುವರಾಜ್ ಕುಮಾರ್, ರಾಘಣ್ಣ ಸಮಾಧಿ ಬಳಿ ಬಂದರು. ನೂರಾರು ಅಭಿಮಾನಿಗಳು ಗುರು ಅವರಿಗೆ ಜೈಕಾರ ಹಾಕಿ ಸ್ವಾಗತ ಕೋರಿದರು.
ಇಂತಹ ಅಭಿಮಾನಿಗಳನ್ನೆಲ್ಲ ನೋಡ್ತಾ ಇದ್ರೆ ನಾವೇ ಅಪ್ಪುನ ಜಾಸ್ತಿ ಪ್ರೀತಿ ಮಾಡ್ಲಿಲ್ವೇನೋ ಅನ್ಸುತ್ತೆ. ಅಪ್ಪ ಅಭಿಮಾನಿಗಳನ್ನ ದೇವರು ಅಂದ್ರೆ, ಇವರೆಲ್ಲ ರಾಜ್‍ಕುಮಾರ್ ಮಗನನ್ನ ದೇವರು ಅಂತಿದಾರೆ ಎಂದು ಭಾವುಕರಾದರು ರಾಘಣ್ಣ.