ಹೆಚ್ಚೂ ಕಡಿಮೆ ಕಳೆದ 2 ವರ್ಷಗಳಿಂದ ಸ್ಟಾರ್ ನಟರ ಹುಟ್ಟುಹಬ್ಬಗಳು, ಅದ್ಧೂರಿತನಗಳು ನಿಂತೇ ಹೋಗಿವೆ. ಮೊದಲನೆಯದಾಗಿ ಕೋವಿಡ್ ಕಾರಣ. ಹೀಗಾಗಿ ಈ ಬಾರಿ ಕೂಡಾ ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಹಾಗೆ ನೋಡಿದರೆ ವಿಜಯ್ ಅವರ ಹುಟ್ಟುಹಬ್ಬಕ್ಕೆ ಸಂಭ್ರಮದ ಕಾರಣವಿದೆ. ಈ ವರ್ಷದ ಸೂಪರ್ ಹಿಟ್ ಸಿನಿಮಾ ಸಲಗ ವಿಜಯ್ ಅವರದ್ದೇ. ಅಲ್ಲದೆ ಸಲಗ, ವಿಜಯ್ ನಿರ್ದೇಶಿಸಿದ ಮೊದಲ ಸಿನಿಮಾ ಕೂಡಾ. ಇದೆಲ್ಲದರ ಜೊತೆಗೆ 2021 ವಿಜಯ್ ಪಾಲಿಗೆ ನೋವಿನ ವರ್ಷವೂ ಹೌದು.
ಅಪ್ಪ ಮತ್ತು ಅಮ್ಮ ಇಬ್ಬರನ್ನೂ ಕಳೆದುಕೊಂಡೆ. ಆತ್ಮೀಯರಾದ ಪುನೀತ್ ರಾಜ್ಕುಮಾರ್ ಕೂಡಾ ದೂರವಾದರು. ಇಷ್ಟು ನೋವಿಟ್ಟುಕೊಂಡು ಹೇಗೆ ಹುಟ್ಟುಹಬ್ಬ ಆಚರಿಸಲಿ? ಕೋವಿಡ್ ಬೇರೆ ಇದೆ. ದಯವಿಟ್ಟು ಯಾರೂ ನನ್ನ ಮನೆ ಬಳಿ ಬರಬೇಡಿ. ನಾನು ಮನೆಯಲ್ಲಿ ಇರುವುದಿಲ್ಲ. ಅಭಿಮಾನಿಗಳೇ.. ಅಪ್ಪ ಅಮ್ಮನನ್ನು ಕಳೆದುಕೊಂಡ ನನಗೆ ನೀವೇ ಅಪ್ಪ ಅಮ್ಮ. ನಿಮ್ಮ ಪ್ರೀತಿ, ಹಾರೈಕೆ ಇರಲಿ ಎಂದಿದ್ದಾರೆ ದುನಿಯಾ ವಿಜಯ್.