ಕೆಜಿಎಫ್ ಚಾಪ್ಟರ್ 2 ಶುರುವಾದ ನಂತರ ಹೊರಬಿದ್ದ ಸ್ಟಿಲ್ಸ್ಗಳು ಪ್ರೇಕ್ಷಕರಿಗೆ ಬೇರೆಯದೇ ಕುತೂಹಲ ಹುಟ್ಟಿಸಿದ್ದವು. ಸಂಜಯ್ ದತ್ ಅವರ ಅಧೀರನ ಕಥೆ ಒಂದಾದರೆ, ರಾಕಿಭಾಯ್ ಸ್ಟೋರಿಯೇ ಬೇರೆ. ಇದರ ನಡುವೆ ಕುತೂಹಲದ ಪರ್ವತವನ್ನೇ ಸೃಷ್ಟಿಸಿದ್ದು ರಮಿಕಾ ಸೇನ್ ಪಾತ್ರ.
ರಮಿಕಾ ಸೇನ್ ಎಂದರೆ ಭಾರತದ ಪ್ರಧಾನಿ. ಈ ಪಾತ್ರದ ಲುಕ್ ಹೊರಬಿದ್ದಾಗ ಎಲ್ಲರಿಗೂ ನೆನಪಾಗಿದ್ದು ಇಂದಿರಾ ಗಾಂಧಿ.
ಇಂದಿರಾ ಗಾಂಧಿಯವರಿಗೂ ರಮಿಕಾ ಸೇನ್ ಪಾತ್ರಕ್ಕೂ ಯಾವುದೇ ಸಂಬಂಧ ಇಲ್ಲ. ನಾನೂ ಈ ರೀತಿಯ ವಿಶ್ಲೇಷಣೆಗಳನ್ನು ನೋಡಿದ್ದೇನೆ. ಅದು 80ರ ದಶಕದ ಕಥೆ. ಆ ಕಾಲದಲ್ಲಿದ್ದ ಒಬ್ಬ ಪ್ರಧಾನಿಯ ಪಾತ್ರ. ಅಷ್ಟೆ. ಇಂದಿರಾ ಅವರ ವ್ಯಕ್ತಿತ್ವ, ಪಾತ್ರ, ಹೆಸರು ಯಾವುದಕ್ಕೂ ಇದು ಸಂಬಂಧ ಇಲ್ಲ ಎಂದಿದ್ದಾರೆ ರವೀನಾ ಟಂಡನ್.
ನಾನು ಮತ್ತು ಸಂಜಯ್ ದತ್ ಒಟ್ಟಿಗೇ ನಟಿಸಲು ಹೋದಾಗ ಇಬ್ಬರಿಗೂ ಒಳ್ಳೆ ಚಾನ್ಸ್ ಸಿಕ್ಕಿತು. ತೆರೆಯ ಮೇಲೆ ಅಬ್ಬರಿಸಿಬಿಡೋಣ ಎಂದುಕೊಂಡಿದ್ದೆವು. ಆದರೆ ಡೈರೆಕ್ಟರ್ ಪ್ರಶಾಂತ್ ನೀಲ್ ಕಥೆಯಲ್ಲಿ ನಮ್ಮಿಬ್ಬರಿಗೆ ಒಟ್ಟಿಗೇ ನಟಿಸುವ ದೃಶ್ಯವೇ ಇರಲಿಲ್ಲ. ನಾವು ಕೇಳಿಕೊಂಡರೂ, ಪ್ರಶಾಂತ್ ಒಪ್ಪಲಿಲ್ಲ ಎಂದಿದ್ದಾರೆ ರವೀನಾ.