ಆಕ್ಟ್ 1978 ನಂತರ ಮಂಸೋರೆ ಹೊಸ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕ್ರಿಟಿಕ್ ಅನ್ನೋ ಕಿರುಚಿತ್ರದ ಮೂಲಕ ವ್ಹಾವ್ ಎನ್ನಿಸಿಕೊಂಡಿರೋ ಮಂಸೋರೆ ಹೊಸ ಸಿನಿಮಾ ಘೋಷಿಸಿದ್ದಾರೆ. ಅಂದಹಾಗೆ ಕ್ರಿಟಿಕ್ ಕಿರುಚಿತ್ರ ಸತ್ಯ ಹೆಗಡೆ ನಿರ್ಮಾಣದ್ದು. ಇನ್ನು ಈಗ ಸಿದ್ಧವಾಗುತ್ತಿರುವ 19.20.21 ಸಿನಿಮಾ ಟೈಟಲ್ಲಿನಿಂದಲೇ ಗಮನ ಸೆಳೆದಿದೆ.
ಕೋವಿಡ್ ಕಾಲದಲ್ಲಿ ನಡೆದ ಸತ್ಯ ಘಟನೆಯೊಂದರ ಕಥೆ ಚಿತ್ರದಲ್ಲಿದೆ. ಒಬ್ಬ ವ್ಯಕ್ತಿಯ ಬದುಕಿನಲ್ಲಿ 19.20.21 ನಂಬರ್ ಪಡೆಯುವ ಪ್ರಾಮುಖ್ಯತೆಯೇ ಚಿತ್ರದ ಕಥೆ. ಅದನ್ನು ಸಸ್ಪೆನ್ಸ್ ಥ್ರಿಲ್ಲರ್ ಜಾನರ್ನಲ್ಲಿ ಹೇಳಲಿದ್ದೇವೆ ಎಂದಿದ್ದಾರೆ ಮಂಸೋರೆ. ದೇವರಾಜ್ ನಿರ್ಮಾಣದ ಸಿನಿಮಾದ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ.