ಸಖತ್ ಬ್ಯುಸಿಯಾಗಿರುವ ಪ್ರಜ್ವಲ್ ದೇವರಾಜ್ ಅವರ ಹೊಸ ಚಿತ್ರ ಸೆಟ್ಟೇರಿದೆ. ಪ್ರಜ್ವಲ್ ಅವರ ಅರ್ಜುನ್ ಗೌಡ ಸಿನಿಮಾ ವರ್ಷದ ಕೊನೆಗೆ ರಿಲೀಸ್ ಆಗಿತ್ತು. ಬೆನ್ನಲ್ಲೇ ಗಣ, ಮಾಫಿಯಾ ಚಿತ್ರಗಳು ಸೆಟ್ಟೇರಿದ್ದವು. ಈಗ ಇನ್ನೊಂದು ಸಿನಿಮಾ. ಈ ಚಿತ್ರಕ್ಕೆ ಪ್ರಜ್ವಲ್ ಗೆಳೆಯ ಪನ್ನಗಾಭರಣ ಡೈರೆಕ್ಟರ್.
ಬಾಲಿವುಡ್ ಚಿತ್ರಗಳಲ್ಲೂ ನಟಿಸಿರುವ ನಟ ಅಧೀರ್ ಭಟ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ವಾಸುಕಿ ವೈಭವ್ ಮ್ಯೂಸಿಕ್ ಇದೆ. ರಾಜಶ್ರೀ ಪೊನ್ನಪ್ಪ ನಿರ್ಮಾಣದ ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ.