ಅಯೋಗ್ಯದ ಸಕ್ಸಸ್ ಜೋಡಿ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಮತ್ತೆ ಜೊತೆಯಾಗಿರುವ ಸಿನಿಮಾ ಮ್ಯಾಟ್ನಿ. ಒಂದರ ಹಿಂದೊಂದು ರಿಲೀಸ್ ಮತ್ತು ಶೂಟಿಂಗ್ ಎರಡರಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಚಿತಾ ರಾಮ್ ಇತ್ತೀಚೆಗೆ ಅನಾರೋಗ್ಯಕ್ಕೊಳಗಾಗಿದ್ದರು. ಚೇತರಿಸಿಕೊಂಡಿರುವ ರಚಿತಾ ಮತ್ತೆ ಚಿತ್ರೀಕರಣಕ್ಕೆ ಬಂದಿದ್ದಾರೆ. ಮ್ಯಾಟ್ನಿ ರೊಮ್ಯಾನ್ಸ್‍ಗೆ.
ಉಪ್ಪಿ ರೆಸಾಟ್ರ್ಸ್‍ನಲ್ಲಿ ಮ್ಯಾಟ್ನಿ ಚಿತ್ರದ ಲವ್ ಸೀನ್‍ಗಳ ಚಿತ್ರೀಕರಣ ಶುರುವಾಗಿದೆ. ಮನೋಹರ್ ಕಂಪಲ್ಲಿ ನಿರ್ದೇಶನದ ಮ್ಯಾಟ್ನಿ, ರೊಮ್ಯಾಂಟಿಕ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿದೆ.