ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಇದರ ಜೊತೆಯಲ್ಲೇ ನಿಖಿಲ್ ಹೊಸ ಸಿನಿಮಾದ ಶೂಟಿಂಗ್ ಶುರುವಾಗಿದೆ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ.
ಮಂಜು ಅಥರ್ವ ಎಂಬುವವರು ಈ ಚಿತ್ರದ ನಿರ್ದೇಶಕರು. ಈ ಮೊದಲು ಪ್ರೇಮಂ ಪೂಜ್ಯಂ ಚಿತ್ರದ ರಾಘವೇಂದ್ರ ಅವರ ಜೊತೆ ಸಹನಿರ್ದೇಶಕರಾಗಿದ್ದವರು ಮಂಜು ಅಥರ್ವ. ಕೆವಿಎನ್ ಸಂಸ್ಥೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಪಕರಾಗಿದ್ದಾರೆ.