ಮುಂಗಾರು ಮಳೆ. 2006ರಲ್ಲಿ ರಿಲೀಸ್ ಆದ ಸಿನಿಮಾ ಒಂದು ಕಡೆ ದಾಖಲೆಗಳ ಮೇಲೆ ದಾಖಲೆ ಬರೆದಿದ್ದು ಗೊತ್ತೇ ಇದೆ. ಗಣೇಶ್ ಎಂಬ ನಟ ಗೋಲ್ಡನ್ ಸ್ಟಾರ್ ಆಗಿದ್ದ್ದು, ಯೋಗರಾಜ್ ಭಟ್ ಎಂಬ ನಿರ್ದೇಶಕ ಸ್ಟಾರ್ ಡೈರೆಕ್ಟರ್ ಆಗಿದ್ದು, ಪೂಜಾ ಗಾಂಧಿ, ಕ್ಯಾಮೆರಾಮನ್ ಕೃಷ್ಣ, ಕಥೆಗಾರ ಪ್ರೀತಂ.. ಹೀಗೆ ಆ ಚಿತ್ರದಲ್ಲಿ ನಟಿಸಿದ್ದವರು, ತಂತ್ರಜ್ಞರು ಎಲ್ಲರಿಗೂ ಹೊಸ ಭವಿಷ್ಯವನ್ನೇ ಕಟ್ಟಿಕೊಟ್ಟಿತು. ಅಂತಾ ಚಿತ್ರದ ಹೊಸದೊಂದು ರೋಚಕ ಸಂಗತಿ ಈಗ ಬಯಲಾಗಿದೆ.
ಮುಂಗಾರು ಮಳೆ ಕಥೆಯನ್ನು ಮೊದಲಿಗೆ ಪುನೀತ್-ರಮ್ಯಾ ಮಾಡಬೇಕಿತ್ತು ಎಂಬ ಸುದ್ದಿ ಚಿತ್ರರಂಗದ ಹಲವರಿಗೆ ಗೊತ್ತಿದ್ದ ವಿಷಯವೇ. ಆದರೆ, ಈ ಚಿತ್ರದ ಕಥೆ ಹೊಸಬರಿಗೇ ಸೂಟ್ ಆಗುತ್ತೆ. ಹೊಸಬರನ್ನೇ ಹಾಕಿಕೊಂಡು ಮಾಡಿ ಎಂದು ಸಲಹೆ ಕೊಟ್ಟಿದ್ದವರು ರಾಘಣ್ಣ ಮತ್ತು ಅಪ್ಪು ಅನ್ನೋ ಸತ್ಯವನ್ನು ಸ್ವತಃ ಯೋಗರಾಜ್ ಭಟ್ ರಿಯಾಲಿಟಿ ಶೋವೊಂದರಲ್ಲಿ ಹೇಳಿಕೊಂಡಿದ್ದಾರೆ. ನಂತರ ಎಂಟ್ರಿ ಕೊಟ್ಟಿದ್ದು ಗಣೇಶ್.
ಮುಂಗಾರು ಮಳೆಗೆ ಮೊದಲು ನಾವಿಟ್ಟುಕೊಂಡಿದ್ದ ಟೈಟಲ್ ಚುಮ್ಮಾ. ಈಗೇನಾದರೂ ಅದೇ ಚಿತ್ರವನ್ನು ಚುಮ್ಮಾ ಅನ್ನೋ ಟೈಟಲ್ಲಿನಲ್ಲಿ ತೋರಿಸಿದರೆ ಇದೇ ಜನ ಏನು ಮಾಡ್ತಾರೋ ಗೊತ್ತಿಲ್ಲ ಎಂದಿದ್ದಾರೆ ಭಟ್ಟರು.