` ಅಪ್ಪನಾಗಿ 6 ವರ್ಷವಾದ ಮೇಲೆ ಅಭಿಮಾನಿಗಳಿಗೆ ಶರಣಾದ ಸತೀಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಪ್ಪನಾಗಿ 6 ವರ್ಷವಾದ ಮೇಲೆ ಅಭಿಮಾನಿಗಳಿಗೆ ಶರಣಾದ ಸತೀಶ್
ಅಪ್ಪನಾಗಿ 6 ವರ್ಷವಾದ ಮೇಲೆ ಅಭಿಮಾನಿಗಳಿಗೆ ಶರಣಾದ ಸತೀಶ್

ನೀನಾಸಂ ಸತೀಶ್ ತಮ್ಮ ಪರ್ಸನಲ್ ಮತ್ತು ಸಿನಿಮಾ ಲೈಫ್ ಎರಡರ ಮಧ್ಯೆ ಒಂದು ಅಂತರವಿಟ್ಟುಕೊಂಡೇ ಇದ್ದಾರೆ. ಸುಪ್ರೀತಾರನ್ನು ಮದುವೆಯಾಗಿ ಮಗುವಾಗಿ 6 ವರ್ಷವಾಗಿದೆ. ಆದರೆ ಎಲ್ಲಿಯೂ ಮಗುವಿನ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿರಲಿಲ್ಲ. ಈಗ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮಗಳ ಫೋಟೋ ಹೊರಬಿಟ್ಟಿದ್ದಾರೆ ನೀನಾಸಂ ಸತೀಶ್.

ಮಗಳು ಮನಸ್ವಿತಳ ಪ್ರೈವೆಸಿ ಕಾರಣಕ್ಕೆ ಫೋಟೋ, ವಿಡಿಯೋ ಹಂಚಿಕೊಂಡಿರಲಿಲ್ಲ. ಅಭಿಮಾನಿಗಳು ಮತ್ತು ಸ್ನೇಹಿತರ ಒತ್ತಾಯದ ಮೇಲೆ ಈ ಚಿತ್ರ ಹಾಕುತ್ತಿದ್ದೇನೆ ಎಂದಿರುವ ಸತೀಶ್ 6 ವರ್ಷದ ಮಗಳು ಮನಸ್ವಿತಳ ಮೊದಲ ವರ್ಷದ ಚಿತ್ರವನ್ನಷ್ಟೇ ಹಾಕಿದ್ದಾರೆ.