ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಹುಡುಗಿ ರೆಬಾ ಮೋನಿಕಾ, ಮೊದಲಿಗೆ ನಟಿಸಿದ್ದು ತಮಿಳು, ಮಲಯಾಳಂ ಚಿತ್ರಗಳಲ್ಲಿ. ಮಲಯಾಳಂನಲ್ಲಿ ಫೊರೆನ್ಸಿಕ್, ತಮಿಳಿನಲ್ಲಿ ಬಿಗಿಲ್ ಚಿತ್ರಗಳು ದೊಡ್ಡ ಹೆಸರು ತಂದುಕೊಟ್ಟರೆ, ಕನ್ನಡದಲ್ಲಿ ಈ ಹುಡುಗಿ ಗಮನ ಸೆಳೆದಿದ್ದು ರತ್ನನ್ ಪ್ರಪಂಚ ಚಿತ್ರದಲ್ಲಿ. ಸದ್ಯಕ್ಕೆ ಇನ್ನೂ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿರೋ ರೆಬಾ, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸುಮಾರು 4 ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯ ಜೋಮನ್ ಜೋಸೆಫ್ ಜೊತೆ ವೈವಾಹಿಕ ಜೀವನ ಆರಂಭಿಸಿದ್ದಾರೆ. ಬ್ರಿಗೇಡ್ ರಸ್ತೆಯಲ್ಲಿರೋ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.