ಪೊಲೀಸ್ ಕ್ವಾರ್ಟರ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅನೀಶ್ ತೇಜೇಶ್ವರ್ ಈಗ ಬೆಂಕಿಯಾಗಿದ್ದಾರೆ. 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಅನೀಶ್ ಘೋಷಿಸಿರುವ ಹೊಸ ಚಿತ್ರದ ಟೈಟಲ್ ಬೆಂಕಿ. ಅನೀಶ್ ಅವರ ಮಾಂಜಾ ಮತ್ತು ಎನ್‍ಆರ್‍ಐ ಚಿತ್ರಗಳು ರಿಲೀಸ್ ಆಗೋಕೆ ಸಿದ್ಧವಾಗಿವೆ. ಈ ನಡುವೆಯೇ ಬೆಂಕಿ ಚಿತ್ರ ಘೋಷಣೆಯಾಗಿದೆ.
ಎ.ಆರ್.ಬಾಬು ಅವರ ಪುತ್ರ ಶಾನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಅನೀಶ್ ಅವರೇ ನಿರ್ಮಾಪಕರಾಗಿದ್ದಾರೆ. ಅಣ್ಣ ತಂಗಿ ಸೆಂಟಿಮೆಂಟ್ ಸ್ಟೋರಿಯಿರೋ ಬೆಂಕಿ ಚಿತ್ರಕ್ಕೆ ರೈಡರ್ ಚಿತ್ರದಲ್ಲಿ ಗಮನ ಸೆಳೆದ ಸಂಪದ ಹೀರೋಯಿನ್. ವಿಶೇಷವೆಂದರೆ ಈಗಾಗಲೇ ಚಿತ್ರದ ಶೇ.80ರಷ್ಟು ಮುಗಿದಿದೆಯಂತೆ.