` ಜಗ್ಗೇಶ್ ವೃತ್ತಿ ಬದುಕಿಗೆ ಈ ಚಿತ್ರ ನವಿಲುಗರಿಯಂತೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಜಗ್ಗೇಶ್ ವೃತ್ತಿ ಬದುಕಿಗೆ ಈ ಚಿತ್ರ ನವಿಲುಗರಿಯಂತೆ..!
Raghavendra Stores Movie Image

ನವರಸ ನಾಯಕ ಅನ್ನೋ ಬಿರುದು ಹೊತ್ತಿರೋ ಜಗ್ಗೇಶ್ ಹೆಚ್ಚು ಹೆಚ್ಚಾಗಿ ಗುರುತಿಸಿಕೊಂಡಿದ್ದು ಕಾಮಿಡಿ ಚಿತ್ರಗಳಲ್ಲೇ ಆದರೂ, ಯಾವ ಪಾತ್ರಕ್ಕಾದರೂ ಸೈ ಅನ್ನೋದು ಚಿತ್ರರಂಗಕ್ಕೆ ಗೊತ್ತಿಲ್ಲದೇ ಏನಲ್ಲ. ವಿಲನ್ ಆಗಿಯೂ ಗೆದ್ದು ತೋರಿಸಿರೋ ಜಗ್ಗೇಶ್, ಬೇವು ಬೆಲ್ಲ, ಮೇಕಪ್.. ಸೇರಿದಂತೆ ಹಲವು ಚಿತ್ರಗಳಲ್ಲಿ ಸಕಲ ತಾಕತ್ತನ್ನೂ ತೋರಿಸಿರೋ ನಟ. ಇಂತಹ ಜಗ್ಗೇಶ್ ತಮ್ಮ ವೃತ್ತಿ ಬದುಕಿಗೇ ಈ ಚಿತ್ರ ನವಿಲುಗರಿಯಾಗಲಿದೆ ಎಂದಿರೋದು ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ.

ಹೊಂಬಾಳೆ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರೋ ಜಗ್ಗೇಶ್‍ಗೆ ನಿರ್ದೇಶನ ಮಾಡುತ್ತಿರೋದು ಹಿಟ್ ಚಿತ್ರಗಳ ಸರದಾರ ಸಂತೋಷ್ ಆನಂದರಾಮ್. ಚಿತ್ರದ ಪೋಸ್ಟರ್ ಈಗಾಗಲೇ ಇದೊಂದು ವಿಭಿನ್ನ ಕಥಾಹಂದರದ ಚಿತ್ರ ಎನ್ನೋದನ್ನು ಸಾಬೀತು ಮಾಡಿದೆ. ಇಡೀ ಚಿತ್ರದ ಚಿತ್ರೀಕರಣ ಮಲೆನಾಡಿನಲ್ಲಿ ನಡೆಯಲಿದೆಯಂತೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery