` ರಶ್ಮಿಕಾ ಮಂದಣ್ಣಗೆ ಕನ್ನಡ ಕವನ ಹೇಳಿದ ತೆಲುಗಿನ ಬಾಲಕೃಷ್ಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಶ್ಮಿಕಾ ಮಂದಣ್ಣಗೆ ಕನ್ನಡ ಕವನ ಹೇಳಿದ ತೆಲುಗಿನ ಬಾಲಕೃಷ್ಣ
Rashmika, Nandamuri Balakrishna

ನಂದಮೂರಿ ಬಾಲಕೃಷ್ಣ. ಇತ್ತೀಚೆಗಷ್ಟೇ ಅಖಂಡ ಅನ್ನೋ ಬಾಕ್ಸಾಫೀಸ್ ಚಿಂದಿ ಮಾಡಿದ ಹಿಟ್ ಕೊಟ್ಟಿರುವ ನಟ. ಹಿರಿಯ ಕಲಾವಿದ. ಈಗ ತಾನೇ ಕಿರುತೆರೆಗೆ ರಿಯಾಲಿಟಿ ಶೋವೊಂದಕ್ಕೆ ನಿರೂಪಕರಾಗಿ ಬಂದಿರೋ ಅನ್‍ಸ್ಟಾಪೆಬಲ್ ಬಾಲಯ್ಯಗೆ ಪುಷ್ಪ ಚಿತ್ರದ ರಶ್ಮಿಕಾ ಮಂದಣ್ಣ ಸಿಕ್ಕರು. ಮುಂದೆ ನಡೆದದ್ದು ಈಗ ವೈರಲ್ ಆಗುತ್ತಿದೆ.

ಚೆಲುವಲ್ಲಿ ಬೇಲೂರ ಬಾಲೆ.. ಮನಸ್ಸಿನಲ್ಲಿ ಮೈಸೂರು ಮಲ್ಲೆ.. ನುಡಿಯಲ್ಲಿ ಕಸ್ತೂರಿ ನಡೆಯಲ್ಲಿ ಕಾವೇರಿ.. ಸೊಬಗಲ್ಲಿ ಮಡಿಕೇರಿ.. ನಾಟ್ಯದಲ್ಲಿ ಮಯೂರಿ.. ಕೊಡಗಿನ ಬೆಡಗಿ ಕರ್ನಾಟಕದ ಹುಡುಗಿ..

ಹೀಗೆ ಬಾಲಯ್ಯ ಕನ್ನಡದಲ್ಲಿಯೇ ಹೇಳುತ್ತಿದ್ದರೆ ಕೇಳುತ್ತಾ ನಿಂತವರು ರಶ್ಮಿಕಾ ಮಂದಣ್ಣ. ಇತ್ತೀಚೆಗೆ ಹೆಚ್ಚು ಹೆಚ್ಚು ತೆಲುಗು ಚಿತ್ರಗಳಲ್ಲಿ ನಟಿಸಿ ಕನ್ನಡವೇ ಮರೆತು ಹೋಗಿದೆ ಎಂದಿದ್ದರು ರಶ್ಮಿಕಾ ಮಂದಣ್ಣ. ಅವರ ಎದುರಿಗೆ ತೆಲುಗಿನ ಮೇರುನಟ ಎನ್‍ಟಿಆರ್ ಮಗನಾಗಿ, ಸ್ವತಃ ತೆಲುಗಿನ ಸೂಪರ್ ಸ್ಟಾರ್ ಆಗಿದ್ದುಕೊಂಡು, ಮನೆಯಲ್ಲಿ ತೆಲುಗು ಚಿತ್ರರಂಗದ ಸ್ಟಾರ್‍ಗಳನ್ನೇ ಇಟ್ಟುಕೊಂಡಿರೋ ಬಾಲಕೃಷ್ಣ ತಮಗೆ ಕನ್ನಡವೂ ಚೆನ್ನಾಗಿಯೇ ಬರುತ್ತೆ ಎಂದು ತೋರಿಸಿದ್ದಾರೆ. ಭಾಷೆಯನ್ನು ಮರೆಸುವುದು ಕಾಲವಲ್ಲ, ಮನಸ್ಥಿತಿ ಎಂದು ತೋರಿಸಿಕೊಟ್ಟಿದ್ದಾರೆ.